7 ತಿಂಗಳ ಗರ್ಭಿಣಿ ಅಪಘಾತದಲ್ಲಿ ಮೃತ್ಯು                ರಸ್ತೆಯಲ್ಲೇ ಕಣ್ಣೀರಿಟ್ಟ ಪತಿ        



(ನ್ಯೂಸ್ ಕಡಬ)newskadaba.com ನೆಲಮಂಗಲ, ಆ.07.  ಪತಿ ಎದುರಲ್ಲೇ 7 ತಿಂಗಳ ಗರ್ಭಿಣಿ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಡೆಹಳ್ಳಿ ಗ್ರಾಮದ ಬಳಿ ನಡೆದಿದೆ.





ಸಿಂಚನ(30) ಮಗುವಿನೊಂದಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನೆಲಮಂಗಲ ತಾಲೂಕಿನ ತೋಟನಹಳ್ಳಿ ಗ್ರಾಮದ ಮಂಜುನಾಥ್, ಸಿಂಚನ ದಂಪತಿ  ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಸ್ಕೂಟರ್‌ನಲ್ಲಿ ವಾಪಸ್ ತೆರಳುವಾಗ ಹಿಂಬದಿಯಿಂದ ಲಾರಿ ಗುದ್ದಿದೆ.ಸಿಂಚನ ರಸ್ತೆಗೆ ಬಿದ್ದಿದ್ದು ಅವರ ಮೇಲೆ ಲಾರಿ ಚಕ್ರ ಹರಿದಿದೆ. ಪರಿಣಾಮ ಸಿಂಚನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.






error: Content is protected !!
Scroll to Top