ಬಂಟ್ವಾಳ: ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.07. ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿ ಸಮೀಪ ಪಟ್ಲಕೋಡಿ ಎಂಬಲ್ಲಿ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ತಿಲಕ್‌ ಪೂಜಾರಿ (34) ಎಂದು ಗುರುತಿಸಲಾಗಿದೆ.

ತಿಲಕ್‌ ಪೂಜಾರಿ ಅವಿವಾಹಿತರಾಗಿದ್ದು, ಎಲ್ ಎಲ್ ಬಿ ಪದವಿ ಪಡೆದಿದ್ದರು. ಕೆಲವು ಸಮಯಗಳಿಂದ ಚಾಲಕ ವೃತ್ತಿ ನಿರ್ವಹಿಸುತ್ತಿದ್ದರು. ಸರಿಯಾಗಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಮನನೊಂದಿದ್ದರು ಎನ್ನಲಾಗಿದೆ. ಇದರಿಂದ ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Also Read  ? ಪುತ್ತೂರು: ಪೊಲೀಸ್ ಠಾಣೆಯ 50 ಮೀಟರ್ ಅಂತರದಲ್ಲಿರುವ 4 ಚಿನ್ನಾಭರಣಗಳ ಅಂಗಡಿಗಳಿಂದ ಕಳ್ಳತನ

 

error: Content is protected !!
Scroll to Top