ಸುಳ್ಯ: ಮೋರಿಗೆ ಢಿಕ್ಕಿ ಹೊಡೆದ ಬೈಕ್…!                       ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು      

(ನ್ಯೂಸ್ ಕಡಬ) newskadaba.com ಸುಳ್ಯ, ಆ.05. ಬೈಕ್ ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಪಾಜೆ ಅರಣ್ಯ ಇಲಾಖಾ ಕಛೇರಿ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ.ಮೃತಪಟ್ಟವರನ್ನು ಮೈಸೂರು ಮೂಲದ ಪವನ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ.

ರಾತ್ರಿ ವೇಳೆ ಕೊಯಾನಾಡಿನ ಫಾರೆಸ್ಟ್ ಐ ಬಿ ಬಳಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿದ್ದ ಮೋರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಇಬ್ಬರು ಪಕ್ಕದ ಚರಂಡಿಗೆ ಎಸೆಯಲ್ಪಟ್ಟು ಸ್ಥಳದಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Also Read  ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ

 

error: Content is protected !!