(ನ್ಯೂಸ್ ಕಡಬ)newskadaba.com ಕೇರಳ, ಜು.30. ಉತ್ತರ ಕನ್ನಡ ಶಿರೂರು ಬಳಿ ಭೂಕುಸಿತದ ಕಹಿ ಘಟನೆ ಮಾಸುವ ಮುನ್ನವೇ ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ನೂರಾರು ಮಂದಿ ಮಣ್ಣಿನೊಳಗೆ ಸಿಲುಕಿ ಹಾಕಿಕೊಂಡಿರುವ ಶಂಕೆಯಿದ್ದು ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ನಸುಕಿನ ಜಾವ ದುರ್ಘಟನೆ ಸಂಭವಿಸಿದ್ದು, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಭೂಕುಸಿತವಾದ ಪ್ರದೇಶಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ, ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ವಯನಾಡ್ ಗೆ ತೆರಳುತ್ತಿದೆ ಎಂದು ವರದಿ ತಿಳಿಸಿದೆ.
ಕಣ್ಣೂರು ರಕ್ಷಣಾ ಡಿಕ್ಯೂರಿಟಿ ಕಾರ್ಪೊರೇಷನ್‌ಗಳ ಎರಡು ತಂಡಗಳಿಗೆ ರಕ್ಷಣಾ ಕಾರ್ಯಗಳಲ್ಲಿ ಸಹಾಯ ಮಾಡಲು ವಯನಾಡ್‌ಗೆ ತೆರಳಲು ಸೂಚನೆ ನೀಡಲಾಗಿದೆ.ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.