ಮಂಗಳೂರು: ಮಾದಕ ವಸ್ತು ಸೇವನೆ    ಯುವಕ ಅರೆಸ್ಟ್



(ನ್ಯೂಸ್ ಕಡಬ)newskadaba.com ಮಂಗಳೂರು, ಜು.26. ಮಾದಕ ವಸ್ತು ಸೇವಿಸಿ ತೂರಾಡುತ್ತಿದ್ದ ಯುವಕನನ್ನು ಆ್ಯಂಟಿ ಡ್ರಗ್ಸ್‌ ಟೀಮ್‌ನ ಪಿಎಸ್‌ಐ ಪ್ರದೀಪ್‌ ಟಿ.ಆರ್‌ ಅವರ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ಪುತ್ತೂರು ಎಂಪಿಎಂಸಿ ರಸ್ತೆಯ ನಿವಾಸಿ ಜೋಸ್ವಿನ್‌ ಮಸ್ಕರೇನ್ಹಸ್‌ (24)  ಎಂದು ಗುರುತಿಸಲಾಗಿದೆ.





ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಯುವಕ ಟೆಟ್ರಾ ಹೆಡ್ರಾಕೆನಬಿನಾಯ್ಡ ಎಂಬ ನಿಷೇಧಿತ ಮಾದಕ ದ್ರವ್ಯ ಸೇವನೆ ಮಾಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.






 

error: Content is protected !!
Scroll to Top