ಬಂಟ್ವಾಳ: ವಿವಾಹಿತ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ   ಯುವತಿಯಿಂದ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com. ಬಂಟ್ವಾಳ, ಜು.24. ವಿವಾಹಿತ ವ್ಯಕ್ತಿಯೋರ್ವ ಸಂಬಂಧಿ ಯುವತಿಯನ್ನು ಅಕ್ರಮವಾಗಿ, ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ಗರ್ಭವತಿ ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.

ಗುರುಪ್ರಸಾದ್ ಎಂಬಾತ ಸಂಬಂಧಿ ಯುವತಿಗೆ ಕಳೆದ ಒಂದು ವರ್ಷಗಳಿಂದ ಎರಡು ಬಾರಿ ಇಚ್ಚೆಗೆ ವಿರುದ್ದವಾಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಸಂತ್ರಸ್ತ ಯುವತಿ ಠಾಣೆಗೆ ದೂರು‌ ನೀಡಿದ್ದಾರೆ. ಆರೋಪಿಗೆ ಈಗಾಗಲೇ ‌ಮದುವೆಯಾಗಿದ್ದು, ಸಂತ್ರಸ್ತ ಯುವತಿಗೆ ಅನ್ಯಾಯ ಎಸಗಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಲ್ಲದೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಆರೋಪಿ ಗುರುಪ್ರಸಾದ್ ಪತ್ತೆಗೆ ನಗರ ಠಾಣಾ ಪೊಲೀಸರು ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಅವರ ತಂಡ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

Also Read  ಫೆಂಗಲ್ ಚಂಡಮಾರುತ- ರಾಜ್ಯದಲ್ಲಿ ಈ ವಾರವೂ ಮುಂದುವರಿಯಲಿದೆ ಮಳೆ

 

error: Content is protected !!
Scroll to Top