ಯುವರಾಜ್ ಸಿಂಗ್​ ತಾಯಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳ್ಳತನ

(ನ್ಯೂಸ್‌ ಕಡಬ)newskadaba.com ಹರಿಯಾಣ, ಫೆ.18: ಕ್ರಿಕೆಟರ್ ಯುವರಾಜ್ ಸಿಂಗ್​ ಅವರ ಅಮ್ಮ ವಾಸವಿರುವ ಹರಿಯಾಣದ ಪಂಚಕುಲದಲ್ಲಿರುವ ನಿವಾಸದಲ್ಲಿ ಕಳ್ಳತನವಾಗಿದೆ. ಮನೆಯ ಕಬೋರ್ಡ್​ನಲ್ಲಿ ಸುಮಾರು 75,000 ರೂ. ನಗದು ಮತ್ತು ಆಭರಣ ಕಳವು ಮಾಡಲಾಗಿದೆ ಎಂದು ಯುವಿ ತಾಯಿ ಶಭ್​ನಮ್ ಸಿಂಗ್ ಹೇಳಿದ್ದಾರೆ.

ಯುವಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಮನೆಯ ಸಹಾಯಕಿ ಲಲಿತಾ ದೇವಿ, ಅಡುಗೆ ಸಿಬ್ಬಂದಿ ಸಿಲ್ದರ್ ಪಾಲ್ ಮೇಲೆ ಅನುಮಾನ ಇದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Also Read  2019-20ನೇ ಸಾಲಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡಲಾಗುವ ಬಾಲ ಕಲ್ಯಾಣ ಪುರಸ್ಕಾರ ಪ್ರಶಸ್ತಿ ➤ ಅವಧಿ ವಿಸ್ತರಣೆ

ಯುವಿ ತಾಯಿ ಅವರು ಈ ಹಿಂದೆ ಗುರುಗ್ರಾಮದಲ್ಲಿ ವಾಸವಿದ್ದರು. ಅಕ್ಟೋಬರ್ 5, 2023ರಂದು ಅವರು ಪಂಚಕುಲ MDC ನಿವಾಸಕ್ಕೆ ಬಂದಿದ್ದರು. ಈ ವೇಳೆ ತಂದಿಟ್ಟಿದ್ದ 75 ಸಾವಿರ ರೂಪಾಯಿ ಹಣ ಹಾಗೂ ಆಭರಣಗಳು ಕಾಣೆಯಾಗಿವೆ ಎಂದು ದೂರು ನೀಡಿದ್ದಾರೆ.

error: Content is protected !!
Scroll to Top