ಚಿನ್ನಾ ಪ್ರಿಯರಿಗೆ ಗುಡ್ ನ್ಯೂಸ್ – ಚಿನ್ನ- ಬೆಳ್ಳಿಯ ದರಗಳಲ್ಲಿ ಇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.29. ಬಂಗಾರ, ಬೆಳ್ಳಿಯ ಬೆಲೆಗಳಲ್ಲಿ ಪ್ರತಿದಿನ ವ್ಯತ್ಯಾಸ ಆಗುವುದು ಕಾಮನ್ ಆಗಿದೆ. ಹೀಗಾಗಿ ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಏನೇನು ಆಗಿದೆ ಎಂದು ತಿಳಿದುಕೊಳ್ಳಲು ಭಾರೀ ಉತ್ಸುಕ ಇರುತ್ತದೆ. ಅದೇ ರೀತಿ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಏನೇನಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಕಳೆದ ವಾರ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಇಳಿಕೆಯಾಗಿದೆ. 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,510 ಆಗಿದ್ದು, ನಿನ್ನೆಯ 5,545ಕ್ಕೆ ಹೋಲಿಸಿದರೆ 35 ರೂ., ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್‌ ಚಿನ್ನದ ದರ ಇಂದು 6,011 ಆಗಿದೆ 6,049 ರೂ.ಗೆ ಹೋಲಿಸಿದರೆ ಇಂದು 38 ರೂ ಇಳಿಕೆ ಕಂಡಿದೆ. ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆಯಾಗಿದೆ. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ ಕಂಡಿದೆ ಎನ್ನಲಾಗಿದೆ.

Also Read  ಮನೆಯಲ್ಲಿ ಸಣ್ಣ ಸಣ್ಣ ಕಿರಿಕಿರಿ ಗಂಡ ಹೆಂಡತಿ ಜಗಳ ಮನಸ್ತಾಪ ಉಂಟಾಗಲು ಕಾರಣಗಳು | ಸೂಕ್ತ ನಿವಾರಣೆ ಇಲ್ಲಿದೆ

 

error: Content is protected !!
Scroll to Top