ಉಡಾವಣೆಗೆ ಸಿದ್ಧವಾದ ವಿಶ್ವದ ಅತಿ ದೊಡ್ಡ ಖಾಸಗಿ ಉಪಗ್ರಹ ಜುಪಿಟರ್-3

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.27. ವಿಶ್ವದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ಪ್ರಪಂಚದ ಅತಿ ದೊಡ್ಡ ಖಾಸಗಿ ಸಂವಹನ ಉಪಗ್ರಹ ಜುಪಿಟರ್ 3 ಇಂದು ಹಾರಾಟ ನಡೆಸಲಿದೆ. ಬಿಲಿಯನೇರ್ ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ವಿಭಾಗದ ಕಂಪನಿ SpaceX ಮಾಡಲಿದೆ.


Space.com ಪ್ರಕಾರ , ಫಾಲ್ಕನ್ ಹೆವಿ ರಾಕೆಟ್ ಮ್ಯಾಕ್ಸರ್ ಟೆಕ್ನಾಲಜೀಸ್‌ನ ಅತಿದೊಡ್ಡ ಉಪಗ್ರಹವಾದ ಜುಪಿಟರ್ 3 ಅನ್ನು ಉಡಾವಣೆ ಮಾಡಲಾಗುತ್ತದೆ. ಜುಪಿಟರ್ 3 ಉಪಗ್ರಹವನ್ನು ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿನ ಗ್ರಾಹಕರಿಗೆ ಇಂಟರ್ನೆಟ್ ಸೇವೆಗಳನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಫಾಲ್ಕನ್ ಹೆವಿ ರಾಕೆಟ್ ಜುಪಿಟರ್ 3 ಅನ್ನು ಹೊತ್ತೊಯ್ಯುತ್ತದೆ. ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಲಾಂಚ್ ಕಾಂಪ್ಲೆಕ್ಸ್ -39 ಎ ನಿಂದ ಟೇಕ್ ಆಫ್ ಆಗಲಿದೆ. ಈ ಮೊದಲು, ಉಡಾವಣೆ ಜುಲೈ 26 ರಂದು ನಡೆಯಬೇಕಿತ್ತು. ಆದರೆ ಉಡಾವಣೆಯನ್ನು ಮತ್ತೆ ನಾಸಾ ಕ್ಯಾಲೆಂಡರ್ ಪ್ರಕಾರ ಜು.27ರಂದು ಮರುಹೊಂದಿಸಲಾಗಿದೆ ಎನ್ನಲಾಗಿದೆ.

Also Read  ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಹೋದಲ್ಲೆಲ್ಲಾ ಹೆಣ ಬೀಳುತ್ತಿದೆ ► ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ

error: Content is protected !!
Scroll to Top