ಭರ್ಜರಿ ಏರಿಕೆ ಕಂಡ ಪೆಪ್ಪರ್ – 600ರ ಗಡಿ ದಾಟಿದ ಕಾಳುಮೆಣಸು

(ನ್ಯೂಸ್ ಕಡಬ)newskadaba.com ಮಂಗಳೂರು, ಜು.26. ಕೆಲ ದಿನಗಳ ಹಿಂದೆ ಕೆ.ಜಿ.ಗೆ 480ರಿಂದ 500 ರೂ. ಇದ್ದ ಕಾಳುಮೆಣಸು ದರ, ದಿಢೀರ್ ಆಗಿ ಈಗ 600ರ ಗಡಿ ದಾಟಿದೆ. ಕಾಳುಮೆಣಸಿನ ಧಾರಣೆ ಏರಿಕೆ ಮಾರುಕಟ್ಟೆಯಲ್ಲಿ ಮುಂದುವರಿದಿದ್ದು,  ಕೇರಳದ ಕೊಚ್ಚಿ ಮಾರುಕಟ್ಟೆಯಲ್ಲಿ ಸತತವಾಗಿ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಕೆ.ಜಿ.ಯೊಂದಕ್ಕೆ ಗರಿಷ್ಠ 570ರೂ. ಧಾರಣೆ ದೊರೆತಿದೆ ಎನ್ನಲಾಗಿದೆ.

ಕ್ಯಾಂಪ್ಕೋದಲ್ಲಿ 550 ರೂ ತನಕ ಧಾರಣೆ ಇತ್ತು. ಕಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ 40 ರಿಂದ 50 ರೂ ತನಕ ಧಾರಣೆ ಹೆಚ್ಚಿತ್ತು. ಕಳೆದ ಮೂರು ವರ್ಷದಿಂದ 500ರ ಗಡಿ ದಾಟದೆ ಇದ್ದ ಕರಿಮೆಣಸಿನ ಧಾರಣೆ 2023ರ ಜುಲೈನಲ್ಲಿ 600ರ ಗಡಿ ದಾಟಿದ್ದು, ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

error: Content is protected !!

Join the Group

Join WhatsApp Group