(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.22. ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಆರಂಭದಲ್ಲೇ ವಿಘ್ನ ಕಾಡಿದ್ದು, ದಿನವೊಂದಕ್ಕೆ ಒಂದು ಕೇಂದ್ರದಿಂದ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸುವಂತೆ ಸುತ್ತೋಲೆ ಹೊರಡಿಸಿದ್ದ ಸರ್ಕಾರದ ನಿರ್ಧಾರದಿಂದ ‘ಗೃಹಲಕ್ಷ್ಮಿಯರು’ ಸಹನೆ ಕಳೆದುಕೊಂಡಿದ್ದಾರೆ.
60 ಅರ್ಜಿ ಸ್ವೀಕರಿಸುವ ಕೇಂದ್ರದಲ್ಲಿ 200-300 ಮಹಿಳೆಯರು ನೋಂದಣಿಗೆ ತೆರಳಿರುವುದರಿಂದ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಈ ಸಮಸ್ಯೆ ಉಂಟಾಗಿದ್ದರಿಂದ ಒಂದು ದಿನದ ನಂತರ ಸರ್ಕಾರ ನಿಯಮ ಬದಲಾಯಿಸಿದ್ದು, ದಿನದ ನೋಂದಣಿ ಮಿತಿಯನ್ನು ತೆರವುಗೊಳಿಸಿದೆ.
ಇನ್ನು ಗೃಹಲಕ್ಷ್ಮಿ ಯೋಜನೆಗಾಗಿ ನೋಂದಣಿ ಮಾಡಿಸಲು ಮುಂದಿನ ವರ್ಷ ಬರುವಂತೆ ಸರ್ಕಾರ ತಿಳಿಸಿದೆ. ಮೊಬೈಲ್ ಗೆ ನೋಂದಣಿ ವೇಳಾಪಟ್ಟಿಯ ಸಂದೇಶ ಬಾರದಿದ್ದವರು ಸರ್ಕಾರ ನೀಡಿರುವ 1902 ಅಥವಾ 8147500500 ನಂಬರ್ಗೆ ಪಡಿತರ ಕಾರ್ಡ್ ಸಂಖ್ಯೆಯನ್ನು ಎಸ್ಎಂಎಸ್ ಮಾಡಿ ತಾವು ನೋಂದಾಯಿಸುವ ಸ್ಥಳ, ಸಮಯವನ್ನು ತಿಳಿದುಕೊಳ್ಳಬಹುದಾಗಿದೆ.