ಶಕ್ತಿ ಯೋಜನೆ ಎಫೆಕ್ಟ್- ಶ್ರೀಮಂತವಾದ ದೇವಾಲಯಗಳು

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.21. ಸಾರಿಗೆ ಬಸ್ ಗಳಲ್ಲಿ ಶಕ್ತಿಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸಿದ ಬೆನ್ನಲ್ಲೇ ದೇವಾಸ್ಥನಗಳಿಗೆ ಮಹಿಳೆಯರ ಭೇಟಿ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ರಾಜ್ಯದ ದೇವಾಲಯಗಳಿಗೆ ಆದಾಯ ಹರಿದುಜ ಬರಲು ಶುರುವಾಗಿದೆ ಎಂದು ವರದಿ ತಿಳಿಸಿದೆ.


ರಾಜ್ಯದ ತೀರ್ಥ ಕ್ಷೇತ್ರಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದೇ ತಿಂಗಳಿನಲ್ಲಿ ಧಾರ್ಮಿಕ ಇಲಾಖೆಯ 58 ದೇವಾಲಯಗಳ ಹುಂಡಿಗಳಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಭಾರೀ ಆದಾಯ ಹೆಚ್ಚಳವಾದಂತೆ ಆಗಿದೆ.

Also Read  ಉಚಿತ ಆಯುಷ್ ಚಿಕಿತ್ಸಾ ಶಿಬಿರ ಕಾರ್ಯಕ್ರಮ

error: Content is protected !!
Scroll to Top