ಅಮೆಜಾನ್ ಕಾಡಿನಲ್ಲಿ ಪತ್ತೆಯಾಗಿದ್ದ ನಾಲ್ಕು ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ !

(ನ್ಯೂಸ್ ಕಡಬ)newskadaba.com ಕೊಲಂಬಿಯಾ, ಜು.15. ವಿಮಾನವೊಂದು ಪತನಗೊಂಡ ಬಳಿಕ 40 ದಿನ ಅಮೆಜಾನ್‌ ದಟ್ಟ ಅರಣ್ಯದಲ್ಲಿ ಸಿಲುಕಿದ್ದ ನಾಲ್ಕು ಮಕ್ಕಳು ಚಿಕಿತ್ಸೆ ಪಡೆದು ಒಂದು ತಿಂಗಳ ಬಳಿಕ ಸೇನಾ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮೇ 1ರಂದು ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನವೊಂದು ಪತನಗೊಂಡಿತ್ತು. ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಕೊಲಂಬಿಯಾ ಸೇನೆ ‘ಆಪರೇಷನ್‌ ಆನ್‌ ಹೋಪ್‌’ ಹೆಸರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಲೆಸ್ಲಿ (13 ), ಸೊಲೀನಿ (9), ಟೈನ್ ನೊರಿಯಲ್ (4) ಮತ್ತು ಕ್ರಿಸ್ಟಿನ್ (11 ತಿಂಗಳು) ಮಗು ಜೂನ್‌ 9ರಂದು ಸೇನೆಗೆ ಸಿಕ್ಕಿದ್ದರು. ನಂತರ ಅವರನ್ನು ಬೊಗೋಟಾದಲ್ಲಿರುವ ಸೇನಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ದಾಖಲಿಸಿಲಾಯಿತ್ತು.

 

error: Content is protected !!

Join the Group

Join WhatsApp Group