ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಯುವಕ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾರ್ಕಳ, ಜು.15. ಕೂಲಿ ಕಾರ್ಮಿಕ ಯುವಕನೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಾರ್ಕಳ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಸೌರವ್ ಕುಮಾರ್ (20) ಎಂದು ಗುರುತಿಸಲಾಗಿದೆ.


ಕೆಲ ವರ್ಷಗಳ ಹಿಂದೆ ದಿನಗೂಲಿ ಕಾರ್ಮಿಕನಾಗಿ ನಿಟ್ಟೆಗೆ ಬಂದಿದ್ದು, ನಿಟ್ಟೆ ಕಾಲೇಜಿನ ಎದುರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಈತ ಹಾಗೂ ಈತನ ಸ್ನೇಹಿತರು ವಾಸಿಸುತ್ತಿದ್ದ ಕಟ್ಟಡದ ಆಸುಪಾಸಿನಲ್ಲಿ ಮಂಗಗಳ ಕಾಟ ಹೆಚ್ಚಾಗಿತ್ತು. ಕೆಲವು ವಸ್ತುಗಳು ಕಾಣಿಸುತ್ತಿರಲಿಲ್ಲ. ಹೀಗಾಗಿ, ಯುವಕರು ಕಾಣೆಯಾದ ವಸ್ತುಗಳನ್ನು ಹುಡುಕಲು ಟೆರೇಸ್ ಗೆ ಹೋಗುವ ಸಲುವಾಗಿ ಏಣಿಯನ್ನು ಎತ್ತಿದ್ದಾಗ ವಿದ್ಯುತ್ ತಂತಿ ಏಣಿಗೆ ತಗುಲಿದೆ. ಏಣಿ ಹಿಡಿದಿದ್ದ ಸೌರವ್ ಗೆ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.

Also Read  ಕೇವಲ 4999 ರೂ. ಪಾವತಿಸಿ, ಹೊಸ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ ➤ ಕಡಬದ 'ಶ್ರೀ ಮೋಟಾರ್ಸ್' ನಲ್ಲಿ ದ್ವಿಚಕ್ರ ವಾಹನಗಳಿಗೆ ವಿಶೇಷ ಆಫರ್

error: Content is protected !!
Scroll to Top