ಟೊಮೆಟೋ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 15. ಸಾರ್ವಜನಿಕರ ನಿದ್ದೆಗೆಡಿಸಿರುವ ಟೊಮೆಟೋ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಟೊಮೆಟೋ ಬೆಲೆ ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇದ್ದು, ಟೊಮೆಟೋ ಬೆಲೆ ಕೆಜಿಗೆ 300 ರೂ ಏರಿಕೆ ಸಂಭವ ಇದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಟೊಮೆಟೋ ಬೆಳೆ ನಾಶಗೊಂಡಿದ್ದು, ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಯ ಹಾಗೂ ಹವಾಮಾನ ವೈಪರಿತ್ಯದಿಂದ ಟೊಮೊಟೋ ಬೆಳೆ ನಾಶವಾಗಿದೆ. ಕೆಲ ಪ್ರದೇಶಗಳಲ್ಲಿ ಬರದಿಂದಾಗಿ ಕೈಗೆ ಬಂದ ಫಸಲು ಹಾಳಾದ ಕಾರಣದಿಂದಲೂ ಟೊಮೆಟೋ ದರ ದುಬಾರಿಯಾಗಿದೆ ಎಂದು ತಿಳಿದುಬಂದಿದೆ.

Also Read  ಗ್ಯಾಸ್ ಸೋರಿಕೆಯಿಂದ ಮನೆಯಿಡೀ ವ್ಯಾಪಿಸಿದ ಬೆಂಕಿ ➤ ಮಹಿಳೆಯರಿಬ್ಬರು ಸಜೀವ ದಹನ

 

error: Content is protected !!
Scroll to Top