ವಿಟ್ಲ: ಬೈಕ್ ಢಿಕ್ಕಿ ಬಾಲಕಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04.  ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಯೋರ್ವಳಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಾಯಗೊಂಡ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ವರದಿಯಾಗಿದೆ.

ಗಾಯಗೊಂಡ ಬಾಲಕಿಯನ್ನು ವಿಟ್ಲ ಒಕ್ಕೆತ್ತೂರು ನಿವಾಸಿ ಬಶೀರ್ ಅವರ ಪುತ್ರಿ ಫಾತಿಮತ್ ನಿದಾ ಎಂದು ಗುರುತಿಸಲಾಗಿದೆ. ಈಕೆ ವಿಟ್ಲ ಸರಕಾರಿ ವೀರ ಶಾಲೆಯ 5ನೇ ತರಗತಿ ಓದುತ್ತಿದ್ದಲು ಎನ್ನಲಾಗಿದೆ.

ಶಾಲೆ ಹೋಗಲು ಒಕ್ಕೆತ್ತೂರಿನಲ್ಲಿ ಆಟೋ ರಿಕ್ಷಾಕ್ಕೆ ಕಾಯುತ್ತಿದ್ದಾಗ ವಿಟ್ಲ ಕಡೆಯಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.  ತಕ್ಷಣ ಬಾಲಕಿಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

error: Content is protected !!