ವಿಜಯಪುರ: ಸೈನಿಕ ಶಾಲೆಗೆ ತಲುಪಿದ ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರ

(ನ್ಯೂಸ್ ಕಡಬ) newskadaba.com ವಿಜಯಪುರ, ಜ. 03.   ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮದಿಂದ ತೆರೆದ ವಾಹನದಲ್ಲಿ ನಗರದ ಬಿಎಲ್ ಡಿಇ ಆಸ್ಪತ್ರೆ, ಸಿದ್ಧೇಶ್ವರ ದೇವಾಲಯ, ಗಾಂಧಿ ಚೌಕ, ಶಿವಾಜಿ ವೃತ್ತದ ಮಾರ್ಗವಾಗಿ ಸೈನಿಕ ಶಾಲೆಗೆ ತರಲಾಯಿತು.

ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಭಕ್ತರು ಶ್ರೀಗಳ ಪಾರ್ಥೀವ ಶರೀರವನ್ನು ದರ್ಶನ ಮಾಡಿ, ಕೈಮುಗಿದು ಕಂಬನಿ ಮಿಡಿದರು. ಸೈನಿಕ ಶಾಲೆಯ ಆವರಣದಲ್ಲಿ ಬೆಳ್ಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಹಸ್ರಾರು ಭಕ್ತರು ಸೈನಿಕ ಶಾಲೆಯತ್ತ ಧಾವಿಸಿಸತೊಡಗಿದ್ದಾರೆ. ಸಂಜೆ 4ರ ಬಳಿಕ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಸೈನಿಕ ಶಾಲೆಯಿಂದ ಮರಳಿ ಆಶ್ರಮಕ್ಕೆ ತಂದು , ಸಂಜೆ 6ಕ್ಕೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. ಅವರ ಆಶಯದಂತೆ ಪಾರ್ಥೀವ ಶರೀರವನ್ನು ಆಗ್ನಿಗೆ ಅರ್ಪಿಸಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ, ನಾಡಿನ ಗಣ್ಯರು, ಸಚಿವರು, ಶಾಸಕರು, ಮಠಾಧೀಶರು ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Also Read  ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ

error: Content is protected !!
Scroll to Top