ಆನೆ ದಾಳಿ- ಮಹಿಳೆ ಮೃತ್ಯು..!

(ನ್ಯೂಸ್  ಕಡಬ) newskadaba.com ಹುಣಸೂರು, ಡಿ. 30. ಮಹಿಳೆಯ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ಚಿಕ್ಕಬೀಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಯಜಮಾನ ಸಿದ್ದೇಗೌಡರ ಪತ್ನಿ ಚಿಕ್ಕಮ್ಮ (57) ಎಂದು ಗುರುತಿಸಲಾಗಿದೆ. ಇವರು ಜಮೀನಿನಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ ಎನ್ನಲಾಗಿದೆ. ಸ್ಥಳಕ್ಕೆ ಶಾಸಕ ಜಿ.ಟಿ.ದೇವೆಗೌಡ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಆನೆಯನ್ನು ಶೀಘ್ರವಾಗಿ ಹಿಡಿಯುಂತೆ ಅರಣ್ಯಧಿಕಾರಿಗಳಿಗೆ ಸೂಚನೆ ನೀಡಿ, ಸರ್ಕಾರದಿಂದ ಕೊಡುವ ಪರಿಹಾರ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಜಿ.ಟಿ.ದೇವೆಗೌಡ ಸೂಚಿಸಿದರು ಎನ್ನಲಾಗಿದೆ.

Also Read  ಅಕ್ರಮವಾಗಿ ಸಾಗಿಸುತ್ತಿದ್ದ 30 ಕೋಣಗಳ ರಕ್ಷಣೆ ➤ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

 

error: Content is protected !!