ಕಾಡಾನೆ ಹಾವಳಿ ಹಿನ್ನೆಲೆ ➤ ಸೆರೆಗೆ ಸಜ್ಜಾದ ಅರಣ್ಯ ಇಲಾಖೆ

(ನ್ಯೂಸ್ ಕಡಬ) newskadaba.com ಸಿದ್ದಾಪುರ, ಡಿ. 27. ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಸಜ್ಜಾಗಿದೆ.

ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳಾದ ಧನಂಜಯ, ಪ್ರಶಾಂತ, ಸುಗ್ರೀವ, ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯ, ಭೀಮ ಆನೆಗಳು ಈಗಾಗಲೇ ಕರಡಿಗೋಡು ಗ್ರಾಮಕ್ಕೆ ಬಂದಿದ್ದು, ಕರಡಿಗೋಡು ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ತೋಟದಲ್ಲಿ ಬೀಡುಬಿಟ್ಟು, ಕೃಷಿ ಫಸಲು ನಾಶ ಮಾಡುತ್ತಿದ್ದ ಹಾಗೂ ಮಾನವನ ಮೇಲೆ ದಾಳಿಗೆ ಮುಂದಾಗುತ್ತಿದ್ದ ಕಾಡಾನೆಗಳನ್ನು ಸೆರೆ ಹಿಡಿಯಲು ಸಾಕಾನೆಗಳ ಜೊತೆ ಅರಣ್ಯಧಿಕಾರಿಗಳು ಸಜ್ಜಾಗಿದ್ದಾರೆ. ಸಿ.ಸಿ.ಎಫ್ ಮೂರ್ತಿ ಮಾರ್ಗದರ್ಶನದಲ್ಲಿ  ಡಿ.ಎಫ್.ಒ ಚಕ್ರಪಾಣಿ, ಪೂವಯ್ಯ, ಎ.ಸಿ.ಎಫ್ ನೆಹರು, ಆರ್.ಎಫ್.ಒ ಕಳ್ಳೀರ ದೇವಯ್ಯ, ಡಿ.ಆರ್.ಎಫ್.ಒ ಸಂಜೀತ್ ಸೋಮಯ್ಯ, ಆರ್.ಆರ್.ಟಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

 

error: Content is protected !!

Join the Group

Join WhatsApp Group