ದಾಸ್ತಾನು ಕೊಠಡಿಗೆ ಬೆಂಕಿ ➤ ಅಪಾರ ನಷ್ಟ

(ನ್ಯೂಸ್ ಕಡಬ) newskadaba.com ಉಜಿರೆ, ಡಿ. 27. ಗುತ್ತು ಮನೆ ಬಾಲಚಂದ್ರ ರಾವ್ ಎಂಬವರ ಮನೆಯ ದಾಸ್ತಾನು ಕೊಠಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಉಂಟಾದ ಘಟನೆ ಕಲ್ಮಂಜ ಗ್ರಾಮದಲ್ಲಿ ವರದಿಯಾಗಿದೆ.

ರಬ್ಬರ್ ಸ್ಮೋಕ್ ಹೌಸ್ ನಿಂದ ದಾಸ್ತಾನು ಕೊಠಡಿಗೆ ಬೆಂಕಿ ಆವರಿಸಿದ್ದು, ಸುಮಾರು 7,000 ಕ್ಕಿಂತ ಅಧಿಕ ತೆಂಗಿನಕಾಯಿ, 2 ಕ್ವಿಂಟಾಲ್ ಗಿಂತಲೂ ಹೆಚ್ಚಿನ ರಬ್ಬರ್ ಬೆಂಕಿಗೆ ಆಹುತಿಯಾಗಿದ್ದಲ್ಲದೇ ಬೆಂಕಿಯ ತೀವ್ರತೆಗೆ ಕೊಟ್ಟಿಗೆಯ ಛಾವಣಿ ಹಾಗೂ ಗೋಡೆಗೂ ಹಾನಿ ಉಂಟಾಗಿದ್ದು, ಸುಮಾರು 3 ಲಕ್ಷ ರೂ. ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳೀಯರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳ ತಂಡವು ತುರ್ತು ಕಾರ್ಯಾಚರಣೆಯಿಂದ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಪ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ ! ➤  ಅನುಮಾನ ವ್ಯಕ್ತಪಡಿಸಿದ ಪೋಷಕರು     

error: Content is protected !!
Scroll to Top