ಯುವಕನ ಮೇಲೆ ಚಿರತೆ ದಾಳಿ ➤ ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com  ಮೈಸೂರು , ಡಿ 19 :  ಯುವರನೋರ್ವನ ಮೇಲೆ ಎರಗಿ ಚಿರತೆಯೊಂದು ದಾಳಿ ಮಾಡಿರುವ ಘಟನೆ  ನರಸೀಪುರ ತಾಲೂಕಿನ ಬನ್ನೂರಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡ ಯುವಕನ್ನು ಸತೀಶ್ ಎಂದು ಗುರುತಿಸಲಾಗಿದೆ. ಈತ ಜಮೀನಿಗೆ ತೆರಳಿದ್ದ ವೇಳೆ ಚಿರತೆಯೊಂದು ಏಕಾಏಕಿಯಾಗಿ  ದಾಳಿ ಮಾಡಿದೆ ಬಳಿಕ ತನ್ನ ಬಳಿ ಇದ್ದ ಮೊಬೈಲ್ ನಿಂದ ಚಿರತೆಗೆ ಹೊಡೆದು ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ದಾಳಿಯಿಂದ ಚಿರತೆ ಓಡಿ ಹೋಗಿದೆ . ಇದೇ ಚಿರತೆ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬಲಿ ಪಡೆದಿತ್ತು ಎನ್ನಲಾಗಿದೆ.

Also Read  ದ.ಕ. ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣಾ ಫಲಿತಾಂಶ

error: Content is protected !!