ನಾಡಬಂದೂಕಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ತಗುಲಿದ ಗುಂಡು ➤7 ವರ್ಷದ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com  ರಾಮನಗರ , ಡಿ 18 :  ಮಕ್ಕಳಿಬ್ಬರು ನಾಡಬಂದೂಕಿನಲ್ಲಿ ಆಟವಾಡುತ್ತಿದ್ದ  ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ಬಾಲಕನೋರ್ವ ಮೃತಪಟ್ಟ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಶಿವನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಮೃತ ಬಾಲಕನನ್ನು ಉತ್ತರ ಪ್ರದೇಶ ಮೂಲದ ಶಮಾ(7)  ಈತ ಅಮಾನುಲ್ಲಾ ಮತ್ತು ಶಂಸುನಾ ದಂಪತಿಯ ಪುತ್ರ ಎಂದು ಗುರುತಿಸಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿ ಬಾಲಕ ಸಹೋದರ ಸಾಜಿದ್(15) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಡಬಂದೂಕಿನ ಮಾಲಕ ಮಲ್ಲೇಶ್ ಎಂದುವವನ್ನು ಪೊಲೀಸರು ಬಂಧಿಸಿದ್ದಾರೆ. ಬಂದೂಕಿನಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ಬಾಲಕ ಶಮಾಗೆ ತಗುಲಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

Also Read  ಇಂದು A.S.I ಆಗಿ ಅಧಿಕಾರ ಸ್ವೀಕರಿಸಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಮೃತ್ಯು.!

error: Content is protected !!
Scroll to Top