ದಸರಾ ಅಂಬಾರಿ ಹೊತ್ತಿದ್ದ ಆನೆಗೆ ಗುಂಡು ಹೊಡೆದವನ ಬಂಧನ!

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 17. ಮೈಸೂರಿನ ವಿಶ್ವವಿಖ್ಯಾತ ಜಂಜೂ ಸವಾರಿಯಲ್ಲಿ 14 ಭಾರಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತಿದ್ದ ಬಲರಾಮನಿಗೆ ಗುಂಡು ಹಾಕಿದ್ದ ಜಮೀನಿನ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿನ ಮಾಲೀಕನಾಗಿರುವ ಸುರೇಶ್, ತನ್ನ ಜಮೀನಿಗೆ ಅನೆ ಬಂದಿದೆ ಎಂದು ಸಿಟ್ಟಿನಿಂದ ಗುಂಡು ಹಾರಿಸಿದ್ದಾನೆ. ಆತನಿಗೆ ಅದು ಮೈಸೂರಿನ ದಸರಾ ಆನೆ ಎಂದು ತಿಳಿದಿರಲಿಲ್ಲ. ಬಲರಾಮನ ತೊಡೆಗೆ ಗುಂಡುತಾಗಿದೆ. ಆ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಆನೆಗೆ ಚಿಕಿತ್ಸೆ ನೀಡಿದ್ದಾರೆ. ಪ್ರಸ್ತುತ ಬಲರಾಮ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Also Read  ಮಂಗಳೂರು: ಪರಾರಿಯಾಗಲು ಯತ್ನಿಸಿದ ವಿಚಾರಣಾದೀನ ಖೈದಿ ► ಸಾರ್ವಜನಿಕರ ಸಹಾಯದಿಂದ ಆರೋಪಿಯ ಸೆರೆ

 

 

error: Content is protected !!
Scroll to Top