ಕಾಡಿನಲ್ಲಿ ಸ್ಫೋಟಕ ಸಿಡಿದು ನಾಯಿ ಮೃತ್ಯು…!



(ನ್ಯೂಸ್ ಕಡಬ) newskadaba.com ಶ್ರೀನಿವಾಸಪುರ,  ಡಿ. 16. ಕಾಡಿನಲ್ಲಿ ಸ್ಫೋಟಕ ಸಿಡಿದು ಸಾಕು ನಾಯಿಯೊಂದು ಮೃತಪಟ್ಟ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಹೋಬಳಿಯ ಚಿಕ್ಕರಂಗೇಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ.







ಗ್ರಾಮದ ಕುರಿಗಾಹಿಗಳು ಎಂದಿನಂತೆ ಬೆಳಿಗ್ಗೆ ಕುರಿಗಳೊಂದಿಗೆ ಕಾಡಿಗೆ ಹೋಗಿದ್ದು, ಅವರೊಂದಿಗೆ ನಾಯಿಗಳು ಇದ್ದವು. ಸ್ವಲ್ಪ ಹೊತ್ತಿನ ಬಳಿಕ ಭಾರಿ ಶಬ್ದ ಕೇಳಿಸಿ, ಕುರಿಗಾಹಿಗಳು ಶಬ್ದ ಬಂದ ಕಡೆ ಹೋಗಿ ನೋಡಿದಾಗ ನಾಯಿಯೊಂದು ಸತ್ತು ಬಿದ್ದಿತ್ತು. ಬೇಟೆಗಾರರು ಕಾಡು ಹಂದಿಯನ್ನು ಕೊಲ್ಲಲು ಇಟ್ಟಿದ್ದ ಸ್ಫೋಟಕವನ್ನು ನಾಯಿ ಕಚ್ಚಿದೆ ಹಾಗಾಗಿ ನಾಯಿಯ ತಲೆ ಛಿದ್ರಗೊಂಡಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top