ದೇಶದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗ ನಿರ್ಮಾಣ

(ನ್ಯೂಸ್ ಕಡಬ) newskadaba.com ಜಮ್ಮು , ಡಿ. 16. ಭಾರತದ ಅತಿ ಉದ್ದದ ರೈಲ್ವೇ ಸುರಂಗ ಎಂಬ ಖ್ಯಾತಿಗೆ ಪಾತ್ರವಾಗಿದ್ದ ನಿರ್ಮಾಣ ಹಂತದಲ್ಲಿದ್ದ 111 ಕಿ.ಮೀ. ದೂರದ ಬನಿಹಾಲ್ –ಕಟ್ರಾ ರೈಲ್ವೇ ಮಾರ್ಗದಲ್ಲಿ 12.89 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಇದೊಂದು ರಕ್ಷಣಾ ಸುರಂಗ ಮಾರ್ಗವಾಗಿದ್ದು, ಇದು ತುರ್ತು ಸಂದರ್ಭಗಳಲ್ಲಿ ಬಳಸಲ್ಪಡುತ್ತದೆ. ಉದಮ್ ಪುರ- ಶ್ರೀನಗರ –ಬಾರಾಮುಲ್ಲಾ ರೈಲ್ವೆ ಯೋಜನೆಯ ಭಾಗವಾಗಿರುವ  ಮಾರ್ಗದಲ್ಲಿ ಈಗಾಗಲೇ ನಿರ್ಮಾಣ ಮಾಡಿರುವ 12.75 ಕಿ.ಮೀ. ಉದ್ದದ ಟಿ-49 ಸುರಂಗಕ್ಕೆ ಸಮಾನಾಂತರವಾಗಿ ಈ ರಕ್ಷಣಾ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಇದು ಮುಖ್ಯ ಸುರಂಗ ಮಾರ್ಗಕ್ಕಿಂತಲೂ 140 ಮೀ. ಉದ್ದವಾಗಿದೆ. ಈ 2 ಮಾರ್ಗಗಳ ನಡುವೆ 33 ಕಡೆ ದಾಟುವಂತಹ ಮಾರ್ಗಗಳನ್ನು ನಿರ್ಮಾಣ ಮಾಡಲಾಗಿದೆ. ವಿಶೇಷ  ತಂತ್ರಜ್ಞಾನವನ್ನು ಬಳಕೆ ಮಾಡಿ ಕುದುರೆ ಲಾಳಾಕಾರದಲ್ಲಿ ಈ ಸುರಂಗವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Also Read  ಗಾಂಜಾ ಮತ್ತಿನಲ್ಲಿ ಕಾರು ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ➤ ಸ್ಕೂಟರ್‌ ಸವಾರ ಮೃತ್ಯು

 

error: Content is protected !!
Scroll to Top