(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 16. ಕಳೆದ ಒಂದು ವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸರಾಸರಿ 50 ಮಂದಿಗೆ ಡೆಂಗ್ಯೂ ಜ್ವರ ಹೆಚ್ಚಾಗಿ ಪತ್ತೆಯಾಗುತ್ತಿದ್ದು, ಕಳೆದ ಒಂದು ತಿಂಗಳಿನಲ್ಲಿ 720 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟಾರೆ ಪ್ರಕರಣಗಳ ಸಂಖ್ಯೆ ಒಂಬತ್ತು ಸಾವಿರದ ಗಡಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ .35 ರಷ್ಟು ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಇನ್ನೊಂದೆಡೆ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಯೇ ಝಿಕಾ ವೈರಸ್ ಸೋಂಕು ಹರಡಲು ಕೂಡಾ ಕಾರಣವಾಗಿದೆ.
ಚಂಡಮಾರುತ, ಹವಾಮಾನ ಬದಲಾವಣೆಯಿಂದ ಪ್ರಸುತ್ತ ತಿಂಗಳಲ್ಲಿ ಬೆಂಗಳೂರಿನಲ್ಲಿ ಬಹುತೇಕ ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ಸೊಳ್ಳೆಯ ಸಂತತಿ ಹೆಚ್ಚಳವಾಗಿ ಡೆಂಗ್ಯೂ ಜ್ವರ ವ್ಯಾಪಕವಾಗಿ ಹೆಚ್ಚಾಳವಾಗಿದೆ. ಡಿ.8 ರಿಂದ 14 ವರೆಗೂ ನಿತ್ಯ ಒಂದು ಸಾವಿರ ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಶಂಕಿತರು ಎಂದು ಗುರುತಿಸಿ ಈ ಪೈಕಿ 1,415 ಮಂದಿ ಸೋಂಕು ಪರೀಕ್ಷೆ ನಡೆಸಿದ್ದು , 347 ಮಂದಿಯಲ್ಲಿ ಡೆಂಗ್ಯೂ ಸೋಂಕು ದೃಢಪಟ್ಟಿದೆ. ಬೆಂಗಳೂರು ಒಟ್ಟಾರೆ ಪ್ರಕರಣಗಳು 1,982 ಕ್ಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.