ಸ್ಕೇಟಿಂಗ್ ಸ್ಪರ್ಧೆ- ಮಂಗಳೂರಿನ ಶಾಮಿಲ್ ಅರ್ಷದ್ ರಾಷ್ಟ್ರಮಟ್ಟಕ್ಕೆ ಆಯ್ಕೆ            

(ನ್ಯೂಸ್ ಕಡಬ) newskadaba.com  ಮಂಗಳೂರು. ಡಿ. 15. ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ನಲ್ಲಿ ಇತ್ತೀಚೆಗೆ ನಡೆದ ಸಿಬಿಎಸ್ಸಿ ಸೌತ್ ಜೋನ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 16 ವರ್ಷ ಪ್ರಾಯದ ಬಾಲಕರ ಇನ್ ಲೆನ್ ವಿಭಾಗದಲ್ಲಿ ದ.ಕ. ಜಿಲ್ಲೆಯ ಯೆನೆಪೋಯ ಸಿಬಿಎಸ್ಸಿ ಶಾಲೆಯನ್ನು ಪ್ರತಿನಿಧಿಸಿದ್ದ ಮಹಮ್ಮದ್ ಶಾಮಿಲ್ ಅರ್ಷದ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

500+ ಡೀ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ, 300 ಮೀಟರ್ ಟಿ ಟಿ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ ಹಾಗೂ ವೈಯುಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದು, 2023 ರ ಜನವರಿಯಲ್ಲಿ ಗುರ್ಗಾಂವ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಅರ್ಷದ್ ಹುಸೈನ್ ಹಾಗೂ ರಮ್ಲತ್ ದಂಪತಿಯ ಪುತ್ರನಾಗಿರುವ ಈತ ಯೆನೆಪೋಯ ಶಾಲೆಯ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಹೈ- ಫೈಯರ್ಸ್ (ಆರ್) ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ ಆಗಿದ್ದಾರೆ. ಮೋಹನ ದಾಸ್ ಹಾಗೂ ಜಯರಾಜ್ ರ ಮಾರ್ಗದರ್ಶನದಲ್ಲಿ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Also Read  ಹಿಂದುಳಿದ ವರ್ಗಗಳ ಪ್ರೋತ್ಸಾಹಧನ – ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

 

error: Content is protected !!
Scroll to Top