ತುಮಕೂರು: ಬೋನಿಗೆ ಬಿದ್ದ ಚಿರತೆ ➤ ನಿಟ್ಟುಸಿರು ಬಿಟ್ಟ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ತುಮಕೂರು, ಡಿ.15. ಸುಮಾರು 1 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ವೀರಾಪುರ ಗ್ರಾಮದಲ್ಲಿ ಸಂಭವಿಸಿದೆ.

ಕಳೆದ ಕೆಲ ದಿನಗಳಿಂದ ಚಿರತೆ ಹಾವಳಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಇದರಿಂದ ಹೊರಬರುವ ಉದ್ದೇಶದಿಂದ ಚಿರತೆ ಹಿಡಿಯಲು ಗ್ರಾಮದ ರಾಮೇಗೌಡ ಎಂಬವವರ ಜಮೀನಿನಲ್ಲಿ ಬೋನ್ ಇರಿಸಲಾಗಿತ್ತು. ಬೋನಿನೊಳಗೆ ಸತ್ತ ನಾಯಿಯನ್ನು ಇರಿಸಲಾಗಿದ್ದು, ನಾಯಿಯನ್ನು ನೋಡಿ ಬೋನಿನೊಳಗೆ ಬಂದ ಚಿರತೆ ಸೆರೆಯಾಗಿದೆ. ಇದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

Also Read  ಕರ್ನಾಟಕಕ್ಕೆ ನಿರಾಸೆ, ಫೈನಲ್‌ಗೆ ಸೌರಾಷ್ಟ್ರ!

 

 

error: Content is protected !!