(ನ್ಯೂಸ್ ಕಡಬ) newskadaba.com ಮುಂಬೈ ,ಡಿ,13: ಪೊಲೀಸ್ ಠಾಣೆಯ ರೆಕಾರ್ಡ್ ರೂಮ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸಿಬ್ಬಂದಿಯೊಬ್ಬರು ಗಾಯಗೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ಗಾಯಾಳುವನ್ನು ಕಾನ್ಸ್ ಸ್ಟೆಬಲ್ ಅರವಿಂದ ಖೋಟ್ ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಪ್ರಮುಖ ದಾಖಲೆಗಳು ಹಾನಿಗೀಡಾಗಿವೆ. ಖೋಟ್ ಅವರ ದೇಹ ಶೇ.95ರಷ್ಟು ಸುಟ್ಟುಹೋಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.