ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣ ಮಂಟಪದಿಂದ ಓಡಿ ಹೋದ ವರ!!!!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಡಿ.10. ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣ ವರನು ಮದುವೆ ಮಂಟಪದಿಂದ ಓಡಿ ಹೋದ ಆತಂಕಕಾರಿ ಘಟನೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಸಂಭವಿಸಿದೆ.

 

 

ವರನು ವಧುವಿನ ಮನೆಯವರಲ್ಲಿ ವರದಕ್ಷಿಣೆಯಾಗಿ ಬೈಕ್ ನ್ನು ಬೇಡಿಕೆಯಿಟ್ಟಿದ್ದು, ಅವರು ಕೊಡಿಸದೇ ಇದ್ದ ಹಿನ್ನೆಲೆ ವರನು ಮಂಟಪದಿಂದಲೇ ಓಡಿ ಹೋಗಿದ್ದಾನೆ ಎನ್ನಲಾಗಿದೆ. ನಂತರ ಎರಡು ದಿನಗಳ ಬಳಿಕ ಮದುವೆ ಬೇಡ ಎಂದು ಹೋದ ವರನು ಬಂದು ಅದೇ ಮದುವೆ ಮಂಟಪದಲ್ಲಿ ಮದುವೆಯಾದ ಘಟನೆ ವರದಿಯಾಗಿದ್ದು, ಈ ಕುರಿತು ಬಾರಬಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ವಿಟ್ಲ: ಅಪ್ರಾಪ್ತ ಬಾಲಕ ನಾಪತ್ತೆ

 

error: Content is protected !!
Scroll to Top