ಫಾರ್ಮ್ ನಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ…!!!!!

(ನ್ಯೂಸ್ ಕಡಬ) newskadaba.com  ಹಾವೇರಿ, ಡಿ.09. ಚಿರತೆಯೊಂದು ಹಸುವನ್ನು ತಿಂದು ಹಾಕಿದ ಆತಂಕಕಾರಿ ಘಟನೆ ರಾಣೆಬೆನ್ನೂರಿನಲ್ಲಿ ಸಂಭವಿಸಿದೆ.

 

ಫಾರ್ಮ್ ನಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿದ ಚಿರತೆಯು ಹಸುವನ್ನು ತಿಂದಿರುವ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ಪ್ರದೇಶದಲ್ಲಿ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಬೋನ್ ಇರಿಸಿ ಸೆರೆಹಿಡಿಯಬೇಕೆಂದು ರೈತರು ಆಗ್ರಹ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

error: Content is protected !!