(ನ್ಯೂಸ್ ಕಡಬ) newskadaba.com ನ.01: ಮೊದಲ ಬಾರಿಗೆ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ 6ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದರು. 6ನೇ ತಾರೀಖು ಬೆಳಗ್ಗೆ 10:50ಕ್ಕೆ ಬೆಂಗಳೂರಿಗೆ ಖರ್ಗೆ ಆಗಮಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸರ್ವೋದಯ ಹೆಸರಿನ ಸಮಾವೇಶ ಹಮ್ಮಿಕೊಂಡಿದ್ದೇವೆ. ಅಲ್ಲದೇ ಖರ್ಗೆ ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಕಾರ್ಯಕರ್ತರು, ಮುಖಂಡರು ಏರ್‌ಪೋರ್ಟ್‌ಗೆ ಹೋಗುತ್ತೇವೆ. ರಾಜ್ಯದ ವಿವಿಧ ಮೂಲೆಯಿಂದ ಜನ ಬರ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ನಾಯಕರು ಸಮಾವೇಶದಲ್ಲಿ ಭಾಗಿಯಾಗ್ತಾರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೂಡ ಆಗಮಿಸುತ್ತಾರೆ. ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆ ಗ ಸಜ್ಜಾಗ್ತಿದೆ. ಎಲ್ಲ ತಯಾರಿಗಳನ್ನೂ ಕೂಡ ಮಾಡಿಕೊಳ್ತಿದ್ದೇವೆ. ಯಾರು ಚುನಾವಣೆಗೆ ಸ್ಪರ್ಧೆ ಮಾಡಲು ಬಯಸುತ್ತಾರೆ ಅಂತವರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಫಾರ್ಮ್ಯಾಟ್ ಮೂಲಕ ಸ್ವೀಕಾರ ಮಾಡಬಹುದು. 5 ಸಾವಿರ ಕೊಟ್ಟು ಅರ್ಜಿ ಪಡೆಯಬಹುದು. ಅರ್ಜಿಯ ಜತೆಯಲ್ಲಿ 2 ಲಕ್ಷ ಡಿಡಿ ಶುಲ್ಕ ನೀಡಬಹುದು. ಎಸ್.ಸಿ, ಎಸ್.ಟಿಯವರಿಗೆ 1 ಲಕ್ಷ ಡಿಡಿ ಮೂಲಕ ಅರ್ಜಿ ಸಲ್ಲಿಸಬಹುದು. ಬಿಲ್ಡಿಂಗ್ ಫಂಡ್‌ಗೆ ಅದನ್ನು ಬಳಕೆ ಮಾಡಲಾಗುತ್ತದೆ ಎಂದು ಡಿಕೆಶಿ ಹೇಳಿದರು.