ಬೈಕ್ ಖರೀದಿಗಾಗಿ ನಾಣ್ಯಗಳ ಮೂಟೆ ತಂದ ವ್ಯಾಪಾರಿ !!

(ನ್ಯೂಸ್ ಕಡಬ) newskadaba.com ಅಸ್ಸಾಂ ನ.01: ಇಲ್ಲೊಬ್ಬ ಸಣ್ಣ ವ್ಯಾಪಾರಿ ಕೆಲವು ವರ್ಷಗಳಿಂದ ತನ್ನ ವ್ಯಾಪಾರದಲ್ಲಿ ಉಳಿತಾಯವಾಗುತ್ತಿದ್ದ ನಾಣ್ಯಗಳನ್ನು ಕೂಡಿಟ್ಟು ತನ್ನ ಕನಸಿನ ಬೈಕ್ ಖರೀದಿಸಿದ್ದು, ವ್ಯಾಪಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದೆ.

ಅಸ್ಸಾಂ ರಾಜ್ಯದ ಕರೀಮ್​ಗಂಜ್​ ಜಿಲ್ಲೆಯ ರಾಮಕೃಷ್ಣ ನಗರ ಪ್ರದೇಶದ ನಿವಾಸಿಯಾಗಿರುವ ಸುರಂಜನ್ ರಾಯ್ ವೃತ್ತಿಯಲ್ಲಿ ಸಣ್ಣ ಮಟ್ಟದ ವ್ಯಾಪಾರಿಯಾಗಿದ್ದು, ತನ್ನ ಕನಸಿನ ಬೈಕ್ ಖರೀದಿಗಾಗಿ ಕಳೆದೆರಡು ವರ್ಷಗಳಿಂದ ವ್ಯಾಪಾರದಿಂದ ಬರುತ್ತಿದ್ದ ಉಳಿತಾಯವನ್ನು ಮಾಡುತ್ತಿದ್ದ. ಸಣ್ಣ ವ್ಯಾಪಾರಿಯಾಗಿರುವುದರಿಂದ ಚಿಲ್ಲರೆ ಹಣ ಹೆಚ್ಚಾಗಿ ಬರುತ್ತಿದ್ದ ಕಾರಣಕ್ಕೆ ಚಿಲ್ಲರೆಯನ್ನೇ ಸಂಗ್ರಹ ಆರಂಭಿಸಿದ್ದ ಸುರಂಜನ್ ರಾಯ್ ಇದೀಗ ರೂ. 50 ಸಾವಿರ ಮುಂಗಡ ಪಾವತಿಸಿ ಹೊಸ ಬೈಕ್ ಖರೀದಿಸಿದ್ದಾರೆ.

Also Read  ಈ 4 ರಾಶಿಯವರಿಗೆ ಮದುವೆ ಯೋಗ ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

ಕರೀಮ್‌ಗಂಜ್ ನಲ್ಲಿರುವ ಟಿವಿಎಸ್ ಮೋಟಾರ್ ಶೋರೂಂನಲ್ಲಿ ಸುರಂಜನ್ ರಾಯ್ ತಮ್ಮ ಹೊಸ ಅಪಾಚೆ 160 4ವಿ ಬೈಕ್ ಖರೀದಿಸಿದ್ದು, ಆರಂಭದಲ್ಲಿ ಬೈಕ್ ಖರೀದಿಗಾಗಿ ನಾಣ್ಯಗಳನ್ನು ನೀಡಲು ಮುಂದಾದಾಗ ಶೋರೂಂ ಸಿಬ್ಬಂದಿಯು ಆರಂಭದಲ್ಲಿ ಏಣಿಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಕಾರಣಕ್ಕೆ ನಿರಾಕರಿಸಿದ್ದರು. ತದನಂತರ ಬೈಕ್ ಖರೀದಿಗಾಗಿ ವ್ಯಾಪಾರಿಯ ಸಂಕಲ್ಪವನ್ನು ಅರಿತ ಶೋರೂಂ ಮಾಲೀಕರು ನಾಣ್ಯಗಳ ಮೂಟೆಗಳನ್ನು ಸ್ವಿಕರಿಸಿ ವ್ಯಾಪಾರಿಯ ಇಷ್ಟದ ಬೈಕ್ ವಿತರಣೆ ಮಾಡಿದ್ದಾರೆ. ಹೊಸ ಟಿವಿಎಸ್ ಅಪಾಚೆ 160 4ವಿ ಬೈಕ್ ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರಂ ಪ್ರಕಾರ ರೂ. 1.12 ಲಕ್ಷದಿಂದ ರೂ. 1.30 ಲಕ್ಷ ಬೆಲೆ ಹೊಂದಿದ್ದು, ಮಧ್ಯಮ ಗಾತ್ರದ ಬೈಕ್ ಮಾದರಿಗಳಲ್ಲಿ ಇದು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

error: Content is protected !!
Scroll to Top