(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.19: ದಕ್ಷಿಣ ಭಾರತದಲ್ಲಿಯೇ ಪ್ರಥಮವೆನ್ನಲಾದ ಏರಿಯಲ್ ಲ್ಯಾಡರ್ ಪ್ಲಾಟ್ಫಾರ್ಮ್, ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಯಾಗಲಿದ್ದು, ನಾಳೆ ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ & ಗೃಹ ಸಚಿವ ಅರಗ ಜ್ಞಾನೇಂದ್ರ ಲೋಕಾರ್ಪಣೆಗೊಳಿಸಲಿದ್ದಾರೆ. 90 ಮೀಟರ್ ಎತ್ತರದವರೆಗೂ ತಲುಪಿ ಬೆಂಕಿಯನ್ನು ನಂದಿಸುವ ಹಾಗೂ ಅಪಾಯದಲ್ಲಿ ಸಿಲುಕಿದ ನಾಗರಿಕರನ್ನು ರಕ್ಷಿಸಲು ಈ ಏರಿಯಲ್ ಲ್ಯಾಡರ್ ಫ್ಲಾಟ್ ಫಾರಂ ನೆರವಾಗಲಿದ್ದು, ಇದನ್ನು ಫಿನ್ಲ್ಯಾಂಡ್ ದೇಶದಿಂದ ತರಿಸಿಕೊಳ್ಳಲಾಗಿದೆ.
ಈ ಏರಿಯಲ್ ಲಾಡರ್ ಗಳಿಗೆ 30 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದ್ದು, ಇದರಿಂದ ಅಗ್ನಿಶಾಮಕ ಪಡೆ ಇನ್ನಷ್ಟು ಸುಸಜ್ಜಿತವಾದಂತಾಗಿದೆ. ಅಲ್ಲದೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ಬಲಪಡಿಸಲು ಪ್ರಸ್ತುತ ಸಾಲಿನಲ್ಲಿ ಎರಡು ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.