ಕಡಬ: ದಲಿತ್ ಸೇವಾ ಸಮಿತಿ ಮಾಸಿಕ ಸಭೆ ►ಡಿಸಿ ಮನ್ನಾ ಭೂಮಿಯನ್ನು ಭೂರಹಿತ ದಲಿತ ವರ್ಗಕ್ಕೆ ನೀಡಬೇಕು- ರಾಜು ಹೊಸ್ಮಠ

(ನ್ಯೂಸ್ ಕಡಬ) newskadaba.com ಕಡಬ, ನ.14. ತಾಲೂಕು ದಲಿತ್ ಸೇವಾ ಸಮಿತಿಯ ಮಾಸಿಕ ಸಭೆಯು ತಾಲೂಕು ಅಧ್ಯಕ್ಷರಾದ ರಾಜು ಹೊಸ್ಮಠ ಅವರ ಅಧ್ಯಕ್ಷತೆಯಲ್ಲಿ  ಸೈನಿಕ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಬಳಿಕ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಸುಮಾರು 8652 ಎಕ್ರೆ ಡಿಸಿ ಮನ್ನಾ ಭೂಮಿ ಇದ್ದು ಈ ಭೂಮಿಯನ್ನು ಕೂಡಲೆ ಭೂರಹಿತ ಬಡಪಾಯಿ ದಲಿತ ವರ್ಗಕ್ಕೆ ನೀಡುವುದರ ಮೂಲಕ ಸಮಾಜದಲ್ಲಿ ದಲಿತರು ಸ್ವಾಭಿಮಾನದ ಬದುಕನ್ನು ನಡೆಸಲು ಕಂದಾಯ ಇಲಾಖೆಯವರು ಮುಂದಾಗಬೇಕೆಂದು ಹೇಳಿದ ಅವರು ಜಿಲ್ಲೆಯಾದ್ಯಂತ ಹೋರಾಟದ ಪ್ರತಿಫಲವಾಗಿ ಡಿಸಿ ಮನ್ನಾ ಭೂಮಿಯನ್ನು ಗೊತ್ತುಮಾಡಿಸಿದ ನಮ್ಮವರಿಗೆಯೇ ಡಿಸಿ ಮನ್ನಾ ಭೂಮಿಯಿಂದ ಅನ್ಯಾಯವಾಗಿದ್ದು ಈ ಬಗ್ಗೆ ತಾಲೂಕಿನಾದ್ಯಂತ ನಮ್ಮ ಸಂಘಟನೆಯವರು ಒಟ್ಟಾಗಿ ಹೋರಾಡುವುದಲ್ಲದೆ ಸಂಘದ ಕಾರ್ಯಕರ್ತರ ಮನೆಯಲ್ಲಿ 15ಜನ ಸದಸ್ಯರೊಂದಿಗೆ ಒಂದು ದಿನದ ಉಚಿತ ಶ್ರಮದಾನ ಮಾಡುವ ಮೂಲಕ ದಲಿತರ ಪರ ಎಂದು ನಾವಿದ್ದೇವೆ ಎಂದರು.

Also Read  ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಮೃತಪಟ್ಟ ಅಪರಿಚಿತ

ಮಹಿಳಾ ಠಾಣಾ ಎಎಸ್‍ಐ ಸೇಸಮ್ಮ ಮಾತನಾಡಿ ಎಸ್ಸಿ, ಎಸ್ಟಿ ಕುಂದು ಕೊರತೆ ಹಾಗೂ ಮಹಿಳಾ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಸಂಘದ ಪದಾಧಿಕಾರಿಗಳಿಗೆ ರಾಜು ಹೊಸ್ಮಠ, ಅಣ್ಣಪ್ಪ ಕಾರೆಕಾಡ್, ಮೋಹನ ನಾಯ್ಕ, ಅಣ್ಣಿ ಎಲ್ತಿಮಾರ್‍ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ತಾಲೂಕು ಉಪಾಧ್ಯಕ್ಷ ದಾಮೋದರರೊಂದಿಗೆ ಮನೋಹರ ಕೋಡಿಜಾಲ್‍ರವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಪ್ರಹ್ಲಾದ್ ಬೆಳ್ಳಿಪ್ಪಾಡಿರವರು ಸಂಘದ ಸದಸ್ಯರಿಗೆ ಐಡಿ ಕಾರ್ಡ್ ವಿತರಿಸಿದರು.

ವೇದಿಕೆಯಲ್ಲಿ ಹರ್ಷಿತಾ ನಗ್ರಿ, ಬಾಬು ಮರುವಂತಿಲ, ಮಹಿಳಾ ಅಧ್ಯಕ್ಷೆ ಜಯಂತಿ ಆರ್ಲಪದವು ಉಪಸ್ಥಿತರಿದ್ದರು. ನಾರಾಯಣ ನಾಯ್ಕ, ರುಕ್ಮಯ ನಾಯ್ಕ, ಜನಾರ್ಧನ ನಾಯ್ಕ, ಅಶೋಕ ನಾಯ್ಕ, ಹರ್ಷಿತಾ ನಾಯ್ಕ, ವಿಶ್ವನಾಥ ನಾಯ್ಕ ಕೊಳ್ತಿಗೆ, ಲೋಕೇಶ್ ತೆಂಕಿಲ, ಶಾಂತಪ್ಪ ನರಿಮೊಗರು, ರವಿ ಆಲಂಕಾರು, ಸಂಕಪ್ಪ ನಿಡ್ಪಳ್ಳಿ, ಗಾಯತ್ರಿ ದರ್ಬೆ, ಶೇಖರ ಮರುವಂತಿಲ, ಉದಯ ಕೊಯ್ಯೂರು, ಗೋಪಾಲ ಬೀರಿಗ, ಚಿತ್ರಾ ನೆಲ್ಯಾಡಿ, ಕೇಶವ ಕುಪ್ಲಾಜೆ, ಗೋಜ ಪಾಂಜೋಡಿ, ಸುರೇಶ್ ಕುಂಬ್ರ, ಲಲಿತಾ ಕುಂಬ್ರ, ಸರಿತಾ ಪೆರ್ಲಂಪಾಡಿ ಉಪಸ್ಥಿತರಿದ್ದರು. ಪ್ರಸಾದ್ ಬೊಳ್ಮಾರ್ ಸ್ವಾಗತಿಸಿ, ವಂದಿಸಿದರು.  ಸಂಕಪ್ಪ ನಿಡ್ಪಳ್ಳಿ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.

Also Read  ಉಪ್ಪಿನಂಗಡಿ: ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ ಮತ್ತು ಈಶ್ವರಪ್ಪ ವಿರುದ್ದ ಎಸ್ಡಿಪಿಐ ದೂರು

error: Content is protected !!
Scroll to Top