ಮೊಬೈಲ್ ನಲ್ಲಿ ಯುವತಿಯ ಚಿತ್ರ ಸೆರೆಹಿಡಿಯಲೆತ್ನಿಸಿದ ನೌಕರ ಅರೆಸ್ಟ್

(ನ್ಯೂಸ್ ಕಡಬ) newskadaba.com ಕುಂಬಳೆ, ಜು. 25. ಬಟ್ಟೆ ಖರೀದಿಸಿ ಅಳತೆ ಅಂದಾಜಿಸಲು ಟ್ರಯಲ್ ರೂಂ ಗೆ ತೆರೆಳಿದ ಯುವತಿಯು ಬಟ್ಟೆ ಬದಲಾಯಿಸುವ ದೃಶ್ಯವನ್ನು ರಹಸ್ಯವಾಗಿ ಸೆರೆ ಹಿಡಿಯಲೆತ್ನಿಸಿದ ಅಂಗಡಿ ನೌಕರನೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.


ಬಂಧಿತ ಆರೋಪಿಯನ್ನು ಆಸಿಫ್ (24) ಎಂದು ಗುರುತಿಸಲಾಗಿದೆ. ಈತ ಬಟ್ಟೆ ಖರೀದಿಸಲೆಂದು ಅಂಗಡಿಗೆ ಬಂದಿದ್ದ ಯುವತಿಯೊಬ್ಬಳು ಡ್ರೆಸ್ ಅಳತೆ ನೋಡಲೆಂದು ಟ್ರಯಲ್ ರೂಮ್‌ಗೆ ತೆರಳಿ ಬಟ್ಟೆ ಬದಲಾಯಿಸುವ ವೇಳೆ ತನ್ನ ಮೊಬೈಲ್ ಇರಿಸಿ ದೃಶ್ಯವನ್ನು ಸೆರೆ ಹಿಡಿಯಲೆತ್ನಿಸಿದ್ದಾನೆ. ಇದನ್ನು ಗಮನಿಸಿದ ಯುವತಿ ಈ ಬಗ್ಗೆ ಪ್ರಶ್ನಿಸಿ ಆರೋಪಿ ವಿರುದ್ದ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಕಾರ್ ಸ್ಟ್ರೀಟ್ ಸರಕಾರಿ ಕಾಲೇಜಿನಲ್ಲಿ "ಬಿಸಿನೆಸ್ ಲ್ಯಾಬ್" ಶೀಘ್ರ ಆರಂಭ

error: Content is protected !!
Scroll to Top