ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್‌ ► ಪುತ್ತೂರಿನ ಹನುಮಗಿರಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.3. ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್‌ ಪುತ್ತೂರು ತಾಲೂಕಿನ ಈಶ್ವರಮಂಗಿಲದಲ್ಲಿರುವ ಹನುಮಗಿರಿ ಪಂಚಮುಖಿ ಶ್ರೀ ಆಂಜನೇಯ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಕೋದಂಡರಾಮನ ಪ್ರತಿಷ್ಠಾ ಮಹೋತ್ಸವ ಸಲುವಾಗಿ ಬೆಳಗ್ಗೆ ಸುಮಾರು 9.40 ರ ವೇಳೆಗೆ ಆಗಮಿಸಿದ ಅವರನ್ನು ಧರ್ಮಶ್ರೀ ಪ್ರತಿಷ್ಠಾನದ ಮಹಾ ಪೋಷಕರಾದ ಜಿ.ಕೆ. ಮಹಾಬಲೇಶ್ವರ ಭಟ್‌ರವರು ಹಾರಾರ್ಪಣೆ ಮಾಡಿ ಬರಮಾಡಿಕೊಂಡರು.

ಬಳಿಕ ಕೋದಂಡರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು ಅಲ್ಲಿಂದ ಬಂದು ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಬರುವಾಗಲೇ ಉಪವಾಸ ವೃತದಿಂದ ಇದ್ದ ಅವರು ಪೂಜೆಯ ಬಳಿಕ ಕ್ಷೇತ್ರದಲ್ಲಿ ಉಪಾಹಾರ ಸೇವಿಸಿದರು.

Also Read  ಮುಖಕ್ಕೆ ಕೇಕ್ ಹಚ್ಚಿದ ಪತಿ- ಮದುವೆ ಕ್ಯಾನ್ಸಲ್ ಮಾಡಿದ ಯುವತಿ


ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಭಾಗಕ್ಕೆ ಬಂದಾಗ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಈ ದಿನದ ಭೇಟಿ ಮೂರನೆ ಭೇಟಿಯಾಗಿದೆ.  ಬೆಳಗ್ಗಿನಿಂದಲೇ ವೃತಾಚರಣೆಯಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಭೇಟಿ ಮತ್ತು ಪೂಜೆಯಿಂದ ವಿಶೇಷವಾದ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು.

error: Content is protected !!