ಮಕ್ಕಳಿಗೆ ತಿನಸುಗಳನ್ನು ನೀಡುವಾಗ ಎಚ್ಚರ…!!! ►ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಮಗು ಮೃತ್ಯು..!!!  



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಅ.31. ಗಂಟಲಲ್ಲಿ ಚಕ್ಕುಲಿ ಸಿಲುಕಿ ಒಂದು ವರ್ಷದ ಪುಟ್ಟ ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ.







ಮೃತ  ಮಗುವನ್ನು ಅರುಷ್( 1 ವರ್ಷ) ಎಂದು ಗುರುತಿಸಲಾಗಿದ್ದು,  ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ವಿಠಲ ಎಂಬವರ ಮಗ ಎನ್ನಲಾಗಿದೆ.






ಮಗ ಅರುಷ್ ಗೆ ಪೋಷಕರು ತಿನ್ನಲು ಚಕ್ಕುಲಿ ತುಂಡೊಂದನ್ನು ನೀಡಿದ್ದರು. ಏನೂ ಅರಿಯದ ಮುಗ್ಧ ಕಂದಮ್ಮನ ಗಂಟಲಿನಲ್ಲಿ ಚಕ್ಕುಲಿ ತುಂಡು ಸಿಲುಕಿದ ಪರಿಣಾಮ ಮಗುವಿಗೆ ಉಸಿರಾಡಲು ಕಷ್ಟವಾಗಿತ್ತು. ಮಗುವನ್ನು ಗಮನಿಸಿದ ಪೋಷಕರು ಕೂಡಲೇ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ದರಾದ್ರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯ ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

 

error: Content is protected !!
Scroll to Top