ಕಡಬ ತಾಲೂಕಿನ 2 ಸರಕಾರಿ ಶಾಲೆಗಳಿಗೆ ಆಂಗ್ಲ ಮಾಧ್ಯಮ ಭಾಗ್ಯ

(ನ್ಯೂಸ್ ಕಡಬ) newskadaba,ಕಡಬ ಜೂ.26: ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಕಲಿಕೆ ದೊರೆಯಬೇಕು ಎನ್ನುವ ದೃಷ್ಠಿಯಿಂದ ರಾಜ್ಯ ಸರಕಾರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯಲು ಅನುಮತಿ ನೀಡಿದ್ದು, ಇದರಲ್ಲಿ ಕಡಬ ತಾಲೂಕಿನ ಆಲಂಕಾರು ಹಾಗೂ ಬೊಬ್ಬೆಕೇರಿ ಶಾಲೆಗೂ ಈ ಭಾಗ್ಯ ದೊರೆತಿದೆ.

ಸರ್ಕಾರವು 2020-21ನೇ ಸಾಲಿನಲ್ಲಿ ರಾಜ್ಯದ 959 ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಮ ಶಿಕ್ಷಣ ನೀಡಲು ಮುಂದಾಗಿದೆ. ಈ ಯೋಜನೆ ನಿರ್ಧಾರ ಆಗುವ ಮೊದಲೇ ಈ ಎರಡು ಶಾಲೆಗಳಲ್ಲಿ ಪೋಷಕರ, ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ಎಲ್‌ಕೆಜಿ, ಯುಕೆಜಿಯಂತಹ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದ್ದು, ಆಲಂಕಾರು ಶಾಲೆಯಲ್ಲಿ ಎಲ್‌ಕೆಜಿಯಲ್ಲಿ 30 ಮತ್ತು ಯುಕೆಜಿಯಲ್ಲಿ 30 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.ಪುತ್ತೂರು ತಾಲೂಕಿನ ಇರ್ದೆ, ಬಜತ್ತೂರು, ಕಡಬ ತಾಲೂಕಿನ ಆಲಂಕಾರು, ಬೊಬ್ಬೆಕೇರಿ, ಸುಳ್ಯ ತಾಲೂಕಿನ ಮುರುಳ್ಯ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸರಕಾರ ಅನುಮತಿ ನೀಡಿದೆ. ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group