(ನ್ಯೂಸ್ ಕಡಬ) newskadaba, ಸುಳ್ಯ ಜೂ. 20: ಸುಳ್ಯ ನಗರ ಪಂಚಾಯಿತಿನ ಕಸ ಸಾಗಾಟ ವಾಹನ ಸಿಬ್ಬಂದಿ ಕ್ವಾರಂಟೈನ್ ಆಗಿದ್ದರು. ಈ ಸಂದರ್ಭ ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರೇ ಕಸ ಸಾಗಾಟ ವಾಹನದ ಡ್ರೈವರ್ ಆಗಿ ಕಾರ್ಯ ನಿರ್ವಹಿಸಿದರು.
ಇದೀಗ ಎರಡು ದಿನಗಳಿಂದ ಸುಳ್ಯ ನಗರದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಸಿಬ್ಬಂದಿ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ವಿನಯಕುಮಾರ್ ತಾತ್ಕಾಲಿಕ ಸಿಬ್ಬಂದಿ ಹುಡುಕುವ ಬದಲು ತಾನೇ ಸ್ವತಃ ಲಭ್ಯರಿದ್ದ ಕಾರ್ಮಿಕರೊಂದಿಗೆ ಯಾವುದೇ ದೊಡ್ಡಸ್ತಿಕೆ ತೋರದೆ, ಮುಜುಗರವೂ ಪಡದೆ ಕಸ ವಿಲೇವಾರಿ ವಾಹನದ ಸಾರಥಿಯಾಗಿ ಮನೆ- ಮನೆಗೆ ತೆರಳಿ ಕಸ ಸಂಗ್ರಹಿಸಿದರು. ನಪಂ ಆರೋಗ್ಯ ನಿರೀಕ್ಷಕ ಲಿಂಗರಾಜು ಕೂಡ ಅಧ್ಯಕ್ಷರಿಗೆ ಸಾಥ್ ನೀಡಿದರು. ನಪಂ ಅಧ್ಯಕ್ಷರ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದೆ.