(ನ್ಯೂಸ್ ಕಡಬ) newskadaba,ಇಂದೋರ್ ಜೂ.16:ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮೊದಲಿಗೆ ಬ್ಲ್ಯಾಕ್ ಫಂಗಸ್ Black Fungus (ಕಪ್ಪು ಶಿಲೀಂಧ್ರ) ಕಾಣಿಸಿಕೊಂಡಿತು. ಬಳಿಕ ವೈಟ್ ಫಂಗಸ್ White Fungus (ಬಿಳಿ ಶಿಲೀಂಧ್ರ) , ಆನಂತರ ಯೆಲ್ಲೋ ಫಂಗಸ್ Yellow Fungus(ಹಳದಿ ಶಿಲೀಂಧ್ರ) ಪತ್ತೆಯಾಗಿತ್ತು. ಈಗ ಹೊಸದಾಗಿ ಗ್ರೀನ್ ಫಂಗಸ್ Green Fungus(ಹಸಿರು ಶಿಲೀಂಧ್ರ) ಸೋಂಕು ಕಾಣಿಸಿಕೊಳ್ಳಲು ಶುರುವಾಗಿದೆ. ಹೌದು, ಮಧ್ಯಪ್ರದೇಶದ ಇಂದೋರ್(Indore)ನಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್(Green Fungus) ಪತ್ತೆಯಾಗಿರುವುದು ಖಚಿತವಾಗಿದೆ.
34 ವರ್ಷದ ಕೋವಿಡ್(COVID-19) ಗುಣಮುಖ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು, ಇದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ. ಗ್ರೀನ್ ಫಂಗಸ್ ಪತ್ತೆಯಾದ ಕೂಡಲೇ ಆ ವ್ಯಕ್ತಿಯನ್ನು ಏರ್ ಆ್ಯಂಬುಲೆನ್ಸ್ ಮೂಲಕ ಮುಂಬೈಗೆ ಶಿಫ್ಟ್ ಮಾಡಲಾಗಿದೆ ಎಂದು ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.