ಲಿಕ್ಕರ್ ಶಾಪ್ ಓಪನ್ ➤ ಬಾಟಲಿಗೆ ಆರತಿ ಮಾಡಿ, ಮುತ್ತಿಟ್ಟ ಮದ್ಯಪ್ರಿಯರು

(ನ್ಯೂಸ್ ಕಡಬ) newskadaba, ತಮಿಳುನಾಡು ಜೂ.15: ತಮಿಳುನಾಡಿನಲ್ಲಿ ಕೊರೋನಾ ಕೇಸುಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್ 21ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಆದರೆ, ಇನ್ನು ಒಂದು ವಾರಗಳ ಕಾಲ ಲಾಕ್​ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆಯನ್ನೂ ಮಾಡಲಾಗಿದೆ. ಅದರಂತೆ, ತಿಂಗಳುಗಳ ಬಳಿಕ ತಮಿಳುನಾಡಿನಲ್ಲಿ ಬಾರ್, ಮದ್ಯದಂಗಡಿಗಳನ್ನು ಓಪನ್ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ಮದ್ಯಪ್ರಿಯರು ಬಹಳ ಖುಷಿಯಾಗಿದ್ದು, ಮಧುರೈನ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆಲ್ಕೋಹಾಲ್ ಬಾಟಲಿಗೆ ಆರತಿ ಬೆಳಗಿ, ತನ್ನ ಸಂತೋಷವನ್ನು ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.

 

 

ಮಧುರೈನ ರಸ್ತೆಬದಿಯ ಮದ್ಯದಂಗಡಿ ತೆರೆದ ಕೂಡಲೇ ಎಣ್ಣೆ ಬಾಟಲಿ ಖರೀದಿಸಿದ ವ್ಯಕ್ತಿಯೊಬ್ಬ ಆ ಬಾಟಲಿಯನ್ನು ರಸ್ತೆ ಮೇಲಿಟ್ಟು ಆರತಿ ಬೆಳಗಿರುವ ವಿಡಿಯೋವೊಂದು ವೈರಲ್ ಆಗಿದೆ. ಅದಾದ ಬಳಿಕ ಇನ್ನೆರಡು ಆಲ್ಕೋಹಾಲ್ ಬಾಟಲಿ ಖರೀದಿಸಿದ ಆತ ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕಿದ್ದಾನೆ.

Also Read  ನಿಯಂತ್ರಣ ತಪ್ಪಿ ಮೂರು ಬೈಕ್ ಗಳಿಗೆ ಗುದ್ದಿದ ಲಾರಿ - ಸ್ಥಳದಲ್ಲೇ ನಾಲ್ವರು ಮೃತ್ಯು

error: Content is protected !!
Scroll to Top