(ನ್ಯೂಸ್ ಕಡಬ) newskadaba.com ಕಡಬ, ಅ.25. 100 ಸಿಸಿ.ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವುದನ್ನು ನಿಷೇಧಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಆದೇಶದ ಪ್ರಕಾರ ರಾಜ್ಯ ಸರಕಾರ ಈ ಆದೇಶ ಹೊರಡಿಸಿದ್ದು , ಇನ್ನು ಮುಂದೆ ಯಾವುದೇ 100 ಸಿಸಿಗಿಂತ ಕಡಿಮೆ ಇರುವ ವಾಹನಗಳ ನೊಂದಣಿಯನ್ನು ರದ್ದುಪಡಿಸಿದೆ. ಆದರೆ 100 ಸಿಸಿ ಗಿಂತ ಕಡಿಮೆ ಇರುವ ವಾಹನಗಳು ಒಂದು ಸೀಟ್ ಆಳವಡಿಸಿಕೊಂಡು ವಾಹನದ ಸಾಮರ್ಥ್ಯ ಒಂದು ಸೀಟು ಎಂದು ನಮೂದಿಸಿ ವಾಹನವನ್ನು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಹಳೆಯ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಹೊಸದಾಗಿ ನೊಂದಾವಣಿ ಮಾಡಿಕೊಳ್ಳುವ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದೆ.
ನೊಂದಣಿ ರದ್ದಾಗಲಿರುವ ವಾಹನಗಳ ಲಿಸ್ಟ್:
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ – 87.8 ಸಿಸಿ
ಟಿವಿಎಸ್ ಸ್ಪೋರ್ಟ್ – 99.77ಸಿಸಿ
ಹಿರೋ ಎಚ್ ಎಫ್ ಡಿಲಕ್ಸ್ – 97.2 ಸಿಸಿ
ಹಿರೋ ಸ್ಪ್ಲೇಂಡರ್ ಪ್ಲಸ್ – 97.2 ಸಿಸಿ
ಟಿವಿಎಸ್ ಎಕ್ಸ ಎಲ್ 100 – 99.7 ಸಿಸಿ
ಹಿರೋ ಸ್ಪ್ಲೇಂಡರ್ ಪ್ರೋ- 97.2 ಸಿಸಿ
ಹಿರೋ ಎಚ್ ಎಫ್ ಡಿಲಕ್ಸ್ ಇಕೋ – 97 ಸಿಸಿ
ಹಿರೋ ಪ್ಯಾಶನ್ ಪ್ರೋ ಐ3ಎಸ್ – 97.2 ಸಿಸಿ