ಜಿಎಸ್‍ಟಿ ನೀತಿಯಿಂದ ಮತ್ತೊಂದು ಶಾಕ್ ► ಬರುವ ನವೆಂಬರ್ ತಿಂಗಳಿನಿಂದ ಮದುವೆ ಸಮಾರಂಭಗಳು ದುಬಾರಿ..!!!

(ನ್ಯೂಸ್ ಕಡಬ) newskadaba.com ನವದೆಹಲಿ, ಅ.24. ಪ್ರಧಾನಿ ಮೋದಿ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಾ ಬಂದಿದೆಕಳೆದ ವರ್ಷ ನೋಟು ನಿಷೇಧ ಮಾಡಿ ಪ್ರಧಾನಿ ಮೋದಿ ಸರ್ಕಾರ ಶಾಕ್ ಕೊಟ್ಟರೆ, ಈ ಬಾರಿ ದೇಶದಲ್ಲಿ ಜಿಎಸ್‍ಟಿ ನೀತಿಯಿಂದ ಮತ್ತೊಂದು ಶಾಕ್ ಕೊಟ್ಟಿದೆ. ಜಿಎಸ್‍ಟಿ ಜಾರಿಯಿಂದ ಮುಂದೆ ಮದುವೆ ಸಮಾರಂಭ ಇನ್ನೂ  ದುಬಾರಿಯಾಗಿದೆ.

ಜಿಎಸ್‍ಟಿಯಿಂದಾಗಿ ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಭಾರಿ ಹೊಡೆತ ಬೀಳಲಿದೆ. ಜಿಎಸ್‍ಟಿಯಿಂದಾಗಿ ಬಂಗಾರ, ಮದುವೆ ಹಾಲ್ ಬುಕ್ಕಿಂಗ್, ಬಟ್ಟೆ, ಶಾಪಿಂಗ್, ಶಾಮಿಯಾನ, ಊಟ-ತಿಂಡಿ, ಬ್ಯೂಟಿ ಪಾರ್ಲರ್ ಮತ್ತು ವಿವಾಹದ ಇನ್ನಿರ ಸೇವೆಗಳ ಮೇಲೆ ಶೇಕಡಾ 10 ರಿಂದ 15 ರಷ್ಟು ಪರಿಣಾಮ ಬೀರಬಹುದು ಎಂದು ಎಂದು ಉದ್ಯಮ ಚೇಂಬರ್ ಅಸೋಚಾಮ್ ಹೇಳಿದೆ.

Also Read  ಶಾಲಾ ಬಸ್ ಹರಿದು ಬಾಲಕನೋರ್ವ ಮೃತ್ಯು

ಮದುವೆ ಸೇವೆಗಳಾದ ಶಾಪಿಂಗ್, ಟೆಂಟ್ ಬುಕ್ಕಿಂಗ್, ಊಟದ ಸೇವೆ ಮುಂತಾದವುಗಳು ಜಿಎಸ್‍ಟಿಯಿಂದ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಜಿಎಸ್‍ಟಿ ದರ ಸುಮಾರು 18 ರಿಂದ 28ರವರೆಗೆ ಇರುತ್ತದೆ. ಜಿಎಸ್‍ಟಿ ಜಾರಿಗೆ ಬರುವ ಮುಂಚೆ ಇಂತಂಹ ವಿವಾಹದ ವ್ಯವಹಾರಗಳಿಗೆ ಯಾವುದೇ ರೀತಿಯ ಬಿಲ್‍ಗಳನ್ನು ಬಳಸುತ್ತಿರಲಿಲ್ಲ. ಆದ್ದರಿಂದ ಯಾವುದೇ ತೆರೆಯನ್ನು ಪಾವತಿಸಬೇಕಿರಲಿಲ್ಲ. ಅವುಗಳನ್ನು ಒಂದು ಕಾಗದಲ್ಲಿ ಮಾತ್ರ ಬರೆದುಕೊಳ್ಳುತ್ತಿದ್ದರು.

ಜಿಎಸ್ಟಿ ಮದುವೆ ಮೇಲೆ ಹೇಗೆ ಹೊರೆ ಬಿದ್ದಿದೆ ಅಂತಾ ತಿಳಿದುಕೊಳ್ಳಿ:

  •  500 ರೂ. ಗಿಂತ ಮೇಲ್ಪಟ್ಟ ಪಾದರಕ್ಷೆಗೆ ಶೇಕಡಾ 18 ರಷ್ಟು ತೆರಿಗೆ.
  •  ಬಂಗಾರ ಸೇರಿದಂತೆ ಆಭರಣಗಳ ಮೇಲಿನ ತೆರಿಗೆ ಶೇ. 1.6 ರಿಂದ ಶೇ. 3ಕ್ಕೆ ಹೆಚ್ಚಳ.
  •  ಮದುವೆ ಛತ್ರ, ಗಾರ್ಡನ್ ಬುಕ್ಕಿಂಗ್‍ಗೆ ಶೇಕಡಾ 18 ರಷ್ಟು ತೆರಿಗೆ.
  •  ಸ್ಟಾರ್ ಹೋಟೆಲ್‍ಗಳಲ್ಲಿ ಮದುವೆ ಬುಕ್ಕಿಂಗ್‍ಗೆ ಶೇ.28 ರಷ್ಟು ತೆರಿಗೆ.
error: Content is protected !!
Scroll to Top