ತಾ.ಪಂ. ಹಾಗೂ ಗ್ರಾ.ಪಂ. ಅನುದಾನದಲ್ಲಿ ► ಮರ್ದಾಳ ರಸ್ತೆ ದುರಸ್ತಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.17. 2017-18ನೇ ಸಾಲಿನ ತಾ.ಪಂ. ಸದಸ್ಯರ ರೂ 75.000 ಹಾಗೂ ಗ್ರಾ.ಪಂ. ರೂ 31.000 ಅನುದಾನದಲ್ಲಿ ಮರ್ದಾಳ ಗ್ರಾಮದ ನೀರಾಜೆ- ಮುಂಡ್ರಾಡಿ ರಸ್ತೆ ದುರಸ್ತಿಗೊಳಿಸಲು ಸೋಮವಾರ ಚಾಲನೆ ನೀಡಲಾಯಿತು.

ತಾ.ಪಂ.ಸದಸ್ಯೆ ಪಿ.ವೈ ಕುಸುಮ ತೆಂಗಿನಕಾಯಿ ಒಡೆಯುವ ಮೂಲಕ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ,ಪಂ.ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಎ.ಪಿ.ಎಂ.ಸಿ. ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ.ಸದಸ್ಯ ದಾಮೋದರ ಗೌಡ ಡೆಪ್ಪುಣಿ, ಗುತ್ತಿಗೆದಾರ ಅಭಿಲಾಷ್ ಬಿಳಿನೆಲೆ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ವೆಂಕಟಹಿತ್ಲು, ಸ್ಥಳೀಯರಾದ ಹನೀಫ್ ಸಾಹೇಬ್, ರಾಮಣ್ಣ ಗೌಡ, ಚಿದಾನಂದ ಬಸವಪಾಲು, ಪದ್ಮಯ್ಯ ಅಂಬರಬೆಟ್ಟು, ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಹರೀಶ್ ಕೋಡಂದೂರು ಸ್ವಾಗತಿಸಿ, ವಂದಿಸಿದರು.

error: Content is protected !!

Join the Group

Join WhatsApp Group