ಅನುಮಾನಾಸ್ಪದವಾಗಿ ಒಂದೇ ಕುಟುಂಬದ ಐವರ ಶವ ಪತ್ತೆ…!!!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಅ.14. ಒಂದೇ ಕುಟುಂಬಕ್ಕೆ ಸೇರಿದ ಐವರ ಶವಗಳು ನಗರದ ಪತನಚೇರು ಬಳಿಯ ಕೊಲ್ಲರು ಔಟರ್ ರಿಂಗ್ ರೋಡ್ ಬಳಿ ಮಂಗಳವಾರ ಅನುಮಾನಾಸ್ಪದವಾಗಿ ಪತ್ತೆಯಾಗಿವೆ.

ಮೃತರನ್ನು ಪತನಚೇರು ಬಳಿಯ ಅಮೀನ್‍ಪುರ ನಿವಾಸಿಗಳಾದ ಪ್ರಭಾಕರ್ ರೆಡ್ಡಿ, ಲಕ್ಷ್ಮೀ, ಸಿಂಧುಜಾ, ವಂಶಿ ಮತ್ತು ಮಾಧವಿ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಇವರೆಲ್ಲರು ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

ಮೂವರು ಮಹಿಳೆಯರ ಶವಗಳು ಪೊದೆಯಲ್ಲಿ ಪತ್ತೆಯಾಗಿದ್ದು, ಈ ಸ್ಥಳದಿಂದ 2 ಕಿ.ಮೀ. ದೂರದಲ್ಲಿರುವ ಓಆರ್‍ಆರ್ ಬಳಿಯ ಅಂಡರ್ ಪಾಸ್ ಕಾರಿನಲ್ಲಿ ಪ್ರಭಾಕರ್ ರೆಡ್ಡಿ, ಮತ್ತು ಗಂಡು ಮಗುವಿನ ಮೃತ ದೇಹ ಪತ್ತೆಯಾಗಿವೆ.

ಕಾರು ಪತ್ತೆಯಾದ 10 ಮೀಟರ್ ದೂರದಲ್ಲಿ ಅರ್ಧ ತಿಂದಿರುವ ಕೇಕ್ ಪತ್ತೆ ಹಾಗೂ ಕಾರಿನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.

ಮೃತರು ಎರಡು ದಿನಗಳ ಹಿಂದೆ ವಾಟರ್ ಫಾಲ್ಸ್ ನೋಡಲು ತೆರಳುವುದಾಗಿ ಸಂಬಂಧಿ ಬಳಿ ಹೇಳಿಕೊಂಡಿದ್ದರು. ಸಂಜೆ ವೇಳೆಗೆ ವಾಟರ್ ಫಾಲ್ಸ್ ನೋಡಲು ತೆರಳಿದವರ ಮೊಬೈಲ್ ಗಳು ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ಸಂಬಂಧಿ ರವೀಂದ್ರ ರೆಡ್ಡಿ ಎಂಬವರು ನರ್‍ಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರವೀಂದ್ರ ಅವರು ಘಟನಾ ಸ್ಥಳಕ್ಕಾಗಮಿಸಿ ಶವಗಳನ್ನು ಗುರುತಿಸಿದ್ದಾರೆ.

Also Read  ರಾಜ್ಯ ಸರಕಾರದಿಂದ 3 ಕೃಷಿ ಕಾಯ್ದೆ ವಾಪಸ್ ಗೆ ನಿರ್ಧಾರ ➤ ಸಚಿವ ಎನ್.ಚೆಲುವರಾಯಸ್ವಾಮಿ

ಹೊರಗಿನಿಂದ ಲಾಕ್ ಮಾಡಲಾದ ಕಾರಿನಲ್ಲಿ ಇಬ್ಬರು ಶವ ಪತ್ತೆಯಾಗಿದೆ. ಮಹಿಳೆಯರ ಶವಗಳು ಮಾತ್ರ ಕಾರಿನಿಂದ ಎರಡು ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಇನ್ನೂ ಮಹಿಳೆಯರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಆದರೆ ಒಬ್ಬ ಯುವತಿಯ ಶವ ಚಿಕ್ಕ ಮರವೊಂದಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರು ಶವ ನೋಡಿದ ಪೊಲೀಸ್ ಅಧಿಕಾರಿಗಳು ಇದೂವರೆಗೂ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಖಚಿತಪಡಿಸಿಲ್ಲ. ಬೇರೆ ಸ್ಥಳದಲ್ಲಿ ಐವರನ್ನು ಕೊಲೆ ಮಾಡಿ ಈ ರೀತಿಯಾಗಿ ಬೇರೆ ಬೇರೆ ಕಡೆ ಎಸೆಯಲಾಗಿದೆಯೇ ಎಂಬ ಅನುಮಾನಗಳು ಸಹ ಹುಟ್ಟಿಕೊಂಡಿವೆ.

Also Read  ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಇಬ್ಬರು ಆಪ್ತ ಸ್ನೇಹಿತರು

ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೀಪ್ ಶಾಂದಿಲ್ಯ, ಹೆಚ್ಚುವರಿ ಎಸ್‍ಪಿ ಜಾನಕಿ ಶೈಲಜಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತರ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಕಾಲ್ ಡಿಟೇಲ್ಸ್ ಪರಿಶೀಲಿಸುತ್ತಿದ್ದಾರೆ. ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

error: Content is protected !!
Scroll to Top