ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ…!



(ನ್ಯೂಸ್ ಕಡಬ) newskadaba.com ಮೈಸೂರು, ಜ. 04. ಉದ್ಯಪಿಯೋರ್ವರ ಮೃತದೇಹವು ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.






ಮೃತರನ್ನು ಉಮಾಶಂಕರ್ (45) ಎಂದು ಗುರುತಿಸಲಾಗಿದೆ. ಇವರ ಜೊತೆ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದು, ಮೃತದೇಹದ ಬಳಿಯಲ್ಲಿ ಇನ್ಸುಲಿನ್ ಹಾಗೂ ಔಷಧಿಗಳ ಬಾಟಲ್ ಹಾಗೂ ಡೆತ್ ನೋಟ್ ಲಭ್ಯವಾಗಿದೆ. ಸಾಲ ಹಿಂತಿರುಗಿಸುವಂತೆ ಸಾಲಗಾರರು ಪೀಡಿಸುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾರೆ. ಕಾಣೆಯಾಗಿರುವ ಇವರ ಪತ್ನಿಯ ಹುಡುಕಾಟ ಮುಂದುವರೆದಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






error: Content is protected !!
Scroll to Top