ಬಿಜೆಪಿ ಕಾರ್ಯಕರ್ತರ ಪಾಕಿಸ್ತಾನ ಝಿಂದಾಬಾದ್ ಘೋಷಣೆಯನ್ನು ಖಂಡಿಸಿ ಸಿ.ಎಫ್.ಐ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 04. ಉಜಿರೆಯಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ನಡುವೆ  ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿರುವ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಜ್ಯೋತಿ ವೃತ್ತದ ಬಳಿ  ಪ್ರತಿಭಟಿಸಲಾಯಿತು.

ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಅಧ್ಯಕ್ಷ ಹಸನ್ ಸಿರಾಜ್ ಮಾತನಾಡಿ, ಉಜಿರೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವ ಬಿಜೆಪಿ ಕಾರ್ಯಕರ್ತ ಪವನ್ ಧರ್ಮಸ್ಥಳ ಈತನನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದರು.  ಈ ಸಂದರ್ಭ ಮಂಗಳೂರು ಏರಿಯಾ ಅಧ್ಯಕ್ಷೆ ಮುರ್ಷಿದ ಮಲಾರ್ ಮಾತನಾಡಿ ದ.ಕ ಜಿಲ್ಲಾ ಪೋಲೀಸರ ದ್ವಿಮುಖ ಧೋರಣೆಯನ್ನು ಖಂಡಿಸಿದರು.  ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮುನೀರ್ ಬಜಾಲ್ , ಜಿಲ್ಲಾ ಸಮಿತಿ ಸದಸ್ಯರಾದ  ಶರ್ಫುಧ್ಧೀನ್ ಬಜ್ಪೆ ಹಾಗೂ  ಇಹ್ತಿಶಾಮ್  ಉಪಸ್ತಿತರಿದ್ದರು.

Also Read  108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ವೀಕ್ಷಿಸಲು ಪ್ರವೇಶ ಶುಲ್ಕವಿಲ್ಲ

error: Content is protected !!