ಕೋಡಿಂಬಾಳದ ವ್ಯಕ್ತಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ➤ ಹಣಕ್ಕೆ ಬೇಡಿಕೆಯಿಟ್ಟ ಅಪರಿಚಿತರು

(ನ್ಯೂಸ್ ಕಡಬ) newskadaba.com ಕೋಡಿಂಬಾಳ, ಡಿ.22: ಡೆಬಿಟ್ ಕಾರ್ಡ್ ನಂಬರ್ ನೀಡುವಂತೆ ಮತ್ತು ನೆಟ್ವರ್ಕ್ ಲಿಂಕೊಂದಕ್ಕೆ ಲಾಗ್ ಇನ್ ಆಗುವಂತೆ ಕೋಡಿಂಬಾಳದ ಯುವ ಉದ್ಯಮಿಯೊಬ್ಬರಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ಬಂದಿದೆ.

ವಿವಿಧ ಮೊಬೈಲ್ ಸಂಖ್ಯೆಯಿಂದ ಕರೆಮಾಡಿ ಹ ಣಕಾಸು ಸಂಬಂಧಿಸಿದ ಮಾಹಿತಿ ಕೇಳುತ್ತಿರುವುದರಿಂದ ಗಣೇಶ್ ಕೋಡಿಂಬಾಳ ಅವರು ಜಾಗೃತಗೊಂಡು ಮಾಹಿತಿ ನೀಡಿದ್ದಾರೆ.ಕಳೆದ ಮೂರು ದಿನಗಳಿಂದ ಡೆಬಿಟ್ ಕಾರ್ಡ್ ಮಾಹಿತಿ ಕೇಳುತ್ತಿರುವುದಲ್ಲದೆ, ಧ್ವನಿಮುದ್ರಣ ಸಂದೇಶವನ್ನೂ ಕಾಲ್ ಸೆಂಟರ್ ನಿಂದ ಕಳುಹಿಸುತ್ತಿದ್ದಾರೆ.ಗಣೇಶ್ ಅವರು, ಜನರು ಹಣಕಾಸಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ, ಅಪರಿಚಿತ ವ್ಯಕ್ತಿಗಳು ಪೋನಿಗೆ ಯಾವುದೇ ಲಿಂಕ್ ಕಳುಹಿಸಿದರೂ ಅದನ್ನು ತೆರೆಯುವ ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಜನರಿಗೆ ಜಾಗೃತಿ ಸಂದೇಶ ನೀಡಿದ್ದಾರೆ.

Also Read  ಎನ್‌ಕೌಂಟರ್ ನಲ್ಲಿ 9 ನಕ್ಸಲರ ಗುಂಡೇಟಿನಿಂದ ಹತ್ಯೆ

 

error: Content is protected !!
Scroll to Top