ಮಂಗಳೂರು: ಯುವ ಸಬಲೀಕರಣ ನಿಗಮ‌ ಸ್ಥಾಪಿಸಲು ‘ಯುವ ಮುನ್ನಡೆ’ಯಿಂದ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.21: ಯುವ ಸಬಲೀಕರಣ ನಿಗಮ ಸ್ಥಾಪನೆ, ಯುವಜನ ಹಕ್ಕು ಹಾಗೂ ಯುವಜನ ಆಯೋಗ ಜಾರಿಗೊಳಿಸುವಂತೆ ನಗರದ ಯುವ ಮುನ್ನಡೆಯ ಯುವಿಗಳು ಜಿಲ್ಲಾಧಿಕಾರಿ ಸೇರಿದಂತೆ ಸಂಸದ, ಸಚಿವ ಹಾಗೂ ಶಾಸಕರಿಗೆ ಮನವಿ‌ ಸಲ್ಲಿಸಿದರು.

ಯುವ ಮುನ್ನಡೆ ತಂಡವು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿಯವರ ಕಚೇರಿಗಳಿಗೆ ಭೇಟಿ ನೀಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಮನವಿ ಸಲ್ಲಿಸಿದರು. ಈ ಸಂದರ್ಭ ಯುವ ಮುನ್ನಡೆಯ ಮುಂದಾಳುಗಳಾದ ಅಶ್ವಿನಿ, ಫಾತಿಮಾ ಸಫಾ, ನೇಹಾ, ಆಕಾಶ್, ಪ್ರಿಯಾಂಕ, ಪ್ರಾಣೇಶ್ ಉಪಸ್ಥಿತರಿದ್ದರು.

Also Read  ಅನಿಲ್ ಅಂಬಾನಿ ಸೇರಿದಂತೆ 24 ಜನರ ಮೇಲೆ SEBI ಗದಾ ಪ್ರಹಾರ     624 ಕೋಟಿ ರೂ ದಂಡ- 5ವರ್ಷ ನಿಷೇಧ..!

 

error: Content is protected !!